ಕಾಯ್ದಿರಿಸಿದ್ದ ಬಸ್-ರೈಲ್ವೆ ಟಿಕೇಟ್ ಗಳ ರದ್ದು!

almost 6500 ticket of bus and train cancelled due to rain!

17-08-2018

ಬೆಂಗಳೂರು: ನಗರದಿಂದ ನೆರೆಯ ಕೇರಳ, ಕರಾವಳಿ, ಕೊಡಗು ಜಿಲ್ಲೆಗಳಿಗೆ ಪ್ರಯಾಣಿಸಬೇಕಿದ್ದ 6 ಸಾವಿರ ಮಂದಿ ಪ್ರಯಾಣವನ್ನು ರದ್ದುಪಡಿಸಿದ್ದು, ಲಕ್ಷಾಂತರ ರೂಗಳವರೆಗೆ ವಾಪಸ್ ನೀಡಬೇಕಾಗಿದೆ.

ಆ ಭಾಗಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಪ್ರಯಾಣಿಕರು ಮುಂಗಡವಾಗಿ ಕಾಯ್ದಿರಿಸಿದ್ದ ಟಿಕೆಟ್ ರದ್ದುಗೊಳಿಸಿರುವುದರಿಂದ ರೈಲ್ವೆ ಇಲಾಖೆಯು 29 ಲಕ್ಷ ರೂ. ಹಣವನ್ನು ವಾಪಸ್ ಕೊಡಬೇಕಾಗಿದೆ. ಆಗಸ್ಟ್ 14 ರಿಂದ 16ರವರೆಗೆ 6,457 ಮಂದಿ ಟಿಕೆಟ್ ರದ್ದುಗೊಳಿಸಿದ್ದಾರೆ. ಬೆಂಗಳೂರು-ಕನ್ಯಾಕುಮಾರಿ, ಯಶವಂತಪುರ-ಕೂಚುವೇಲಿ, ಯಶವಂತಪುರ-ಕೂಚುವೇಲಿ, ಎಸಿ ಎಕ್ಸ್ ಪ್ರೆಸ್ ಬೆಂಗಳೂರು ಎರ್ನಾಕುಲಂ ಇಂಟರ್ ಸಿಟಿ ಎಕ್ಸ್ ಪ್ರೆಸ್ ರೈಲು ಪ್ರಯಾಣಿಕರಿಗೆ 29,01,296 ಲಕ್ಷ ರೂ. ಹಣವನ್ನು ಟಿಕೆಟ್ ರದ್ದುಪಡಿಸಿರುವ ಪ್ರಯಾಣಿಕರಿಗೆ ಮರಳಿಸಬೇಕಿದೆ.

89 ಲಕ್ಷ ರೂ.ನಷ್ಟ: ಬೆಂಗಳೂರಿನಿಂದ ಕೇರಳಕ್ಕೆ ತೆರಳಬೇಕಾದ ಪ್ರಯಾಣಿಕರು ಬಸ್ ಪ್ರಯಾಣವನ್ನು ರದ್ದುಪಡಿಸಿರುವುದರಿಂದ ಕಳೆದ 3 ದಿನಗಳಲ್ಲಿ ಕೆಎಸ್‍ಆರ್‍ಟಿಸಿ. 89 ಲಕ್ಷ ರೂ. ನಷ್ಟ ಅನುಭವಿಸಿದೆ.

 


ಸಂಬಂಧಿತ ಟ್ಯಾಗ್ಗಳು

Rail Bus ticket ಎರ್ನಾಕುಲಂ ಕನ್ಯಾಕುಮಾರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ