ಲಂಚಕ್ಕೆ ಕೈಯೊಡ್ಡಿದ್ದ ಪೊಲೀಸ್ ಪೇದೆ ಎಸಿಬಿ ಬಲೆಗೆ

Bribe: ACB police caught police constable

17-08-2018

ಚಿಕ್ಕಬಳ್ಳಾಪುರ: ಗ್ರಾನೈಟ್ ಕಾರ್ಖಾನೆಯ ಮ್ಯಾನೇಜರ್ ಒಬ್ಬರಿಗೆ 40 ಸಾವಿರ ಹಣಕ್ಕೆ ಬೇಡಿಕೆಯಿಟ್ಟಿದ್ದ ಪೊಲೀಸ್ ಪೇದೆಯು ಎಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಚಂದ್ರಶೇಖರ್ ನನ್ನು ಬಲೆಗೆ ಕೆಡವಿರುವ ಎಸಿಬಿ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.

ದಿಬ್ಬೂರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ದಿಬ್ಬೂರಹಳ್ಳಿ-ಸಾದಲಿ ಮಾರ್ಗದ ನಡುವೆ ಇರುವ ವಿಶಾಲಾಕ್ಷಿ ಸ್ಟೋನ್ ಆರ್ಟ್ ಗ್ರಾನೈಟ್ ಕಾರ್ಖಾನೆ ಮ್ಯಾನೇಜರ್ ಶಂಕರ್ ಗೆ  40,000 ಹಣಕ್ಕೆ ಬೇಡಿಕೆ ಇಟ್ಟಿದ್ದ ಪೇದೆ ಚಂದ್ರಶೇಖರ್ ಅದನ್ನು ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Police ACB ಸ್ಟೋನ್ ಆರ್ಟ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ