‘ಪಾರ್ಲಿಮೆಂಟ್ ಮುಂದೆ ವಾಜಪೇಯಿ ಪ್ರತಿಮೆ ನಿರ್ಮಾಣವಾಗಬೇಕು’17-08-2018

ಬೆಂಗಳೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನ ಹಿನ್ನೆಲೆ, ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ವಾಜಪೇಯಿ ಅವರಿಗೆ ಪುಷ್ಬ ನಮನ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು. ಆರು ಅಡಿ ಎತ್ತರದ ವಾಜಪೇಯಿ ಅವರ ಭಾವಚಿತ್ರವನ್ನು ಮೈಸೂರು ಬ್ಯಾಂಕ್ ಸರ್ಕಲ್ ನಿಂದ ಕೆಂಪೇಗೌಡ ಬಸ್ ನಿಲ್ದಾಣದವರೆಗೆ ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡಲಾಯಿತು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಳ್ ನಾಗರಾಜ್  'ವಾಜಪೇಯಿ ಅಮರ, ಯುಗ ಪುರುಷ, ಅದ್ಬುತ ‌ಮಹಾನ್ ವ್ಯಕ್ತಿತ್ವ ಎಂದು ಸ್ಮರಿಸಿದರು. ದೇಶಕ್ಕೆ ಶಕ್ತಿ ಕೊಟ್ಟ ಮಹಾನ್ ಮಾನವ, ಅಜಾತಶತ್ರು ಕೇವಲ ಒಂದು ಪಕ್ಷದ ನಾಯಕರಲ್ಲ ಎಲ್ಲ ಪಕ್ಷದ ನಾಯಕರು. ಕರ್ನಾಟಕದೊಂದಿಗೆ ಅವರಿಗೆ ಸಂಬಂಧ ಹೆಚ್ಚು. ಪಾಕಿಸ್ತಾನ, ಭಾರತ ಸೇರಿದಂತೆ ಇತರೆ ದೇಶಗಳು ಅವರನ್ನು ಹೊಗಳಿದ್ದಾರೆ. ಪಾರ್ಲಿಮೆಂಟ್ ಮುಂದೆ ಅವರ ಪ್ರತಿಮೆ ನಿರ್ಮಾಣವಾಗಬೇಕು. ರಾಜ್ಯದಲ್ಲೂ ಅಟಲ್ ಜಿ ಪ್ರತಿಮೆ ನಿರ್ಮಾಣವಾಗ ಬೇಕು' ಎಂದು ವಾಟಳ್ ನಾಗರಾಜ್  ಆಗ್ರಹಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

atal hiari vajapayee vatal nagaraj ಅಜಾತಶತ್ರು ಪ್ರತಿಮೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ