ಮತ್ತೊಬ್ಬ ವಾಜಪೇಯಿ ಹುಟ್ಟಲು ಸಾಧ್ಯವಿಲ್ಲ: ದೇವೇಗೌಡ

H.D.deve gowda

17-08-2018

ನವದೆಹಲಿ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಅಟಲ್ ಬಿಹಾರಿ ವಾಜಪೇಯಿ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದ್ದಾರೆ. ಈ ವೇಳೆ ಮಾತನಾಡಿದ ದೇವೇಗೌಡರು, 'ಇಡೀ ರಾಷ್ಟ್ರದ ಜನತೆಯ ಮನಸ್ಸಲ್ಲಿ ಮರೆಯಲಾಗದ ಸೇವೆಗೆ ಭಾಜನರಾದವರು ವಾಜಪೇಯಿ. ಸುದೀರ್ಘ ರಾಜಕಾರಣ, ಹತ್ತು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ಶೂನ್ಯದಿಂದ ಪಕ್ಷವನ್ನು ಅಧಿಕಾರಕ್ಕೆ ತಂದವರು. ಅಡ್ವಾಣಿ ಮತ್ತು ವಾಜಪೇಯಿ ಜೋಡಿ ಸ್ಮರಣೀಯವಾದದ್ದು ಎಂದರು.

‘ತನಗೆ ವಾಜಪೇಯಿ ಅವರು 1977ರಲ್ಲಿ ಮೊದಲ ಪರಿಚಯ ಎಂದ ಹೆಚ್ಡಿಡಿ 'ನಾನಾಗ ಜನಾತ ಪಕ್ಷದ ಅಧ್ಯಕ್ಷನಾಗಿದ್ದೆ, ನಂತರ ಅವರ ನಿಕಟ ಸಂಬಂಧ ಹೆಚ್ಚು ಬೆಳೆಯಿತು. ಎದುರಾಳಿಗಳ ಮೇಲೆ ಟೀಕೆ ಮಾಡುವಾಗ ಮನಸ್ಸು ನೋಯಿಸುತ್ತಿರಲಿಲ್ಲ. ಕಠಿಣ ಪದ ಬಳಸುತ್ತಿರಲಿಲ್ಲ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದರು. ಅವರ ನೇತೃತ್ವ, ನಾಯಕತ್ವದಲ್ಲೇ ಕಾರ್ಗಿಲ್ ಯುದ್ಧ ಗೆದ್ದಿದ್ದೆವು. ಶಾಂತಿ ರೂಪಿಸಲು ಲಾಹೋರ್ ಗೆ ಬಸ್ಸಿನ ವ್ಯವಸ್ಥೆ ಮಾಡಿದ್ದರು. ಆಗ್ರಾದಲ್ಲಿ ಸಭೆ ಮಾಡಿ ಸಮಸ್ಯೆ ಬಗೆಹರಿಸಿದ್ದರು’ ಎಂದು ಸ್ಮರಿಸಿದರು.

‘ಭಾರತ ರತ್ನಕ್ಕೆ ನಿಜವಾದ ಅರ್ಹತೆ ಪಡೆದವರಾಗಿದ್ದರು. ಇಂದಿರಾ ಗಾಂಧಿ, ಚಂದ್ರ ಶೇಖರ್, ಸಂಪರ್ಕ ಹೊಂದಿದ ನಾಯಕರಾಗಿದ್ದರು. ಮತ್ತೊಬ್ಬ ವಾಜಪೇಯಿ ಹುಟ್ಟಲು ಸಾಧ್ಯವಿಲ್ಲ. ವಾಜಪೇಯಿಯ ಕವಿತೆ, ಸಾಹಿತ್ಯವನ್ನು ಯಾರು ಮೀರಿಸಲು ಸಾಧ್ಯವಿಲ್ಲ’ ಎಂದದಿದ್ದಾರೆ. ‘ನನಗೆ ಕಾಂಗ್ರೆಸ್ ಬೆಂಬಲ ವಿತ್ ಡ್ರಾ ಮಾಡಿದ ಮೇಲೆ ಸರಕಾರ ಉಳಿಸುವ ಮಾತನಾಡಿದ್ದರು, ಅದೇ ನನಗೆ ದೊಡ್ಡ ಸ್ಪೂರ್ತಿಯಾಗಿತ್ತು. ತಿಂಗಳ ಹಿಂದಷ್ಟೇ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದೆ, ನಿಧನದ ಸುದ್ದಿ ಊಹಿಸಿರಲಿಲ್ಲ ಎಂದು ಬೇಸರದಿಂದ ನುಡಿದರು. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದರು.


ಸಂಬಂಧಿತ ಟ್ಯಾಗ್ಗಳು

H.D.Deve Gowda atal bihari vajpayee ಭಾರತ ರತ್ನ ಸಾಹಿತ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ