ಕೇರಳದ 13 ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌

heavy rains in kerala: 13 districts under red alert

17-08-2018

ತಿರುವನಂತಪುರ: ದೇವರನಾಡು ಕೇರಳ ವರುಣನ ಹೊಡೆತಕ್ಕೆ ತತ್ತರಿಸಿ ಹೋಗಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಕೇರಳ ದ್ವೀಪದಂತಾಗಿದೆ. ಭೀಕರ ಮಳೆಗೆ ಈಗಾಗಲೇ 97 ಮಂದಿ ಪ್ರಾಣ ಚೆಲ್ಲಿದ್ದಾರೆ. ಇದೀಗ ಸವಿಗೀಡಾದವರ ಸಂಖ್ಯೆ 108ಕ್ಕೆ ಏರಿಕೆಯಾಗಿದೆ ಎಂದು ತಿಳಿದು ಬಂದಿದೆ. ಇಂದೂ ಕೂಡ್ ಮಳೆ ಮುಂದುವರೆದಿದೆ. 13 ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ.

ಪ್ರವಾಹಕ್ಕೀಡಾಗಿರುವ ತ್ರಿಶೂರ್, ಕಣ್ಣೂರ್‌ ಹಾಗೂ ಕೋಯಿಕ್ಕೋಡ್‌, ಪಥನಂತಿಟ್ಟ, ಎರ್ನಾಕುಲಂನಲ್ಲಿ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಎಲ್ಲಿ ನೋಡಡಿದರೂ ನೀರು, ನೀರು, ಇಲ್ಲಿನ ಜನ ತೀವ್ರ ಪರದಾಡುತ್ತಿದ್ದಾರೆ. ಜಲಾವೃತಗೊಂಡಿರುವ ಮನೆಗಳಲ್ಲಿ ಸಿಲುಕಿಕೊಂಡಿರುವ ಜನರನ್ನು ಸೇನಾ ಪಡೆಗಳು ಮತ್ತು ಎನ್‌ಡಿಆರ್‌ಎಫ್‌ ಸಿಬ್ಬಂದಿಗಳು ದೋಣಿಗಳಲ್ಲಿ ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸುತ್ತಿದ್ದಾರೆ. ಪರಿಹಾರ ಕಾರ್ಯಾಚರಣೆಗೆ ಕೇಂದ್ರ ಸರ್ಕಾರದ ಸೇನಾಪಡೆಯ ವಿಶೇಷ ತಂಡಗಳು ಮತ್ತು ಎನ್‌ಡಿಆರ್‌ಎಫ್‌ನಿಂದ 40 ಹೆಚ್ಚುವರಿ ತಂಡಗಳು ಕೆಲಸ ಮಾಡುತ್ತಿವೆ.


ಸಂಬಂಧಿತ ಟ್ಯಾಗ್ಗಳು

Flood Kerala ಎನ್‌ಡಿಆರ್‌ಎಫ್‌ ಸ್ಥಳಾಂತರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ