ವಾಜಪೇಯಿ ನಿಧನ: ಕಂಬನಿ ಮಿಡಿದ ದೇವೇಗೌಡರು

H.D.Deve Gowda

16-08-2018

ಬೆಂಗಳೂರು: ‘ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ನಿಧನ ಸುದ್ದಿ ಕೇಳಿ ಆಘಾತ ಆಗಿದೆ. ಪ್ರಧಾನ ಮಂತ್ರಿಯಾಗಿ ದೇಶಕ್ಕೆ ಅವರು ಅಪಾರ ಸೇವೆ ಮಾಡಿದ್ದಾರೆ. ಅವರೊಬ್ಬ ಶ್ರೇಷ್ಠ ನಾಯಕ, ಅತ್ಯುತ್ತಮ ಸಂಸದೀಯ ಪಟು, ಅವರ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ' ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಕಂಬನಿ ಮಿಡಿದಿದ್ದಾರೆ.

ರಾಜಕೀಯ ಜೀವನದಲ್ಲಿ ಶತ್ರುವನ್ನೂ ಕೂಡ ಕಟುವಾದ ಶಬ್ಧದಿಂದ ಟೀಕಿಸಿದವರಲ್ಲ. ನಾನು ಪ್ರಧಾನಿಯಾಗಿ ರಾಜೀನಾಮೆ ಕೊಡುವ ವೇಳೆ ದೂರವಾಣಿ ಮುಖೇನ ಅಧಿಕಾರ ಉಳಿಸಿಕೊಡುತ್ತೇನೆ ಎಂದು ಹೇಳಿದ್ರು, ರಾಜಕಾರಣದಲ್ಲಿ ಅತ್ಯಂತ ಎತ್ತರಕ್ಕೆ ಬೆಳೆದವರು.

ಪಾಕಿಸ್ತಾನದ ಸಂಬಂಧ ಕುದುರಿಸಲು ಲಾಹೋರ್ ಗೆ ಬಸ್ ಯಾತ್ರೆ ಮಾಡಿದ್ರು, ಮುಷ್ರಫ್ ಅವರನ್ನು ಕರೆಸಿ ಎಲ್ಲ ರೀತಿಯ ಪ್ರಯತ್ನ ಮಾಡಿದ್ರು, ಆದರೆ ಸಫಲವಾಗಲಿಲ್ಲ. ಶಾಂತೀಯತೆ ಕಾಪಾಡಲು ಪ್ರಯತ್ನ ಮಾಡಿದ್ರು, ಜೊತೆಗೆ ನಮ್ಮ ಸೈನಿಕರ ಸಾಮರ್ಥ್ಯವನ್ನೂ ತೋರಿಸಿಕೊಟ್ಟಿದ್ದಾರೆ.

ರಾಜ್ಯ, ರಾಷ್ಟ್ರದ ಆಡಳಿತ ಹೇಗೆ ನಡೆಸಬೇಕು ಎಂದು ಗೋದ್ರಾ ಪ್ರಕರಣ ಆದಾಗ ಅಂದಿನ ಸಿಎಂ ಮೋದಿ ಅವರಿಗೆ ರಾಜಧರ್ಮ ಪಾಲನೆ ಮಾಡಿಲ್ಲ ಎಂದು ಕಠಿಣವಾಗಿ ಹೇಳಿದ್ರು, ತಮ್ಮ ಪಕ್ಷದ ಸಿಎಂ ಆಗಿದ್ರೂ ಅಂತಹಮಾತು ಹೇಳಿದ್ದು ಅವರ ವ್ಯಕ್ತಿತ್ವ ಎಂತಹದ್ದು ಎಂದು ತೋರಿಸುತ್ತದೆ. ಪ್ರತಿ ವರ್ಷ ಜನವರಿಯಲ್ಲಿ ಅವರ ಮನೆಗೆ ಹೋಗಿ ಬರುತ್ತಿದ್ದೆ. ರಾಜಕೀಯದಲ್ಲಿ ಯಾವುದೇ ಧರ್ಮ ಜಾತಿಗೆ ನೋವು ಉಂಟುಮಾಡಬಾರದು ಎನ್ನುವುದಕ್ಕೆ ಗೋದ್ರಾ ಪ್ರಕರಣದಲ್ಲಿ ಅವರು ನಡೆದುಕೊಂಡ ರೀತಿಯೇ ಸಾಕ್ಷಿ ಎಂದರು.

ಅವರು ಬಹಳ ಸೂಕ್ಷ್ಮ ಸ್ವಭಾವದ ವ್ಯಕ್ತಿ, ರಾಮ ಮಂದಿರ ಕಟ್ಟಲು ಶಿಲೆಗಳನ್ನು ಕಳಿಸಿಕೊಟ್ರು ಅದನ್ನ ವಾಜಪೇಯಿಯವರೇ ತೆಗೆದುಕೊಳ್ಳಬೇಕು ಎಂದು ವಿಹೆಚ್ ಪಿ ಮುಖಂಡರು ಕಟುವಾಗಿ ಹೇಳಿದ್ದರು. ಆದರೆ ಪ್ರಧಾನಿಯಾಗಿದ್ದಾಗ ಅವರು ಹೋಗದೇ ಅಧಿಕಾರಿಯನ್ನ ಕಳಿಸಿದ್ದರು. ಯಾರನ್ನೂ ನೋಯಿಸಬಾರದು ಅನ್ನೋ ಮನೋ ಭಾವನೆ ಹೊಂದಿದ್ದರು. ನಾಳೆ ದೆಹಲಿಗೆ ಹೋಗುತ್ತೇನೆ ಅಜಾತಶತ್ರುವಿಗೆ ಅಂತಿಮ ನಮನ ಸಲ್ಲಿಸುತ್ತಿನಿ, ಅವರ ಆತ್ಮಕ್ಕೆ ದೇವರು ಚಿರಶಾಂತಿ ಕೊಡಲಿ. ಅವರ ಸಂಬಂಧಿಕರಿಗೆ ನೋವನ್ನ ತಡೆದುಕೊಳ್ಳುವ ಶಕ್ತಿ ನೀಡಲಿ, ಸರ್ಕಾರದ ವ್ಯವಸ್ಥೆಗಳನ್ನ ನೋಡಿಕೊಂಡು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಹೇಳಿದ್ದಾರೆ ದೇವೇಗೌಡರು.


ಸಂಬಂಧಿತ ಟ್ಯಾಗ್ಗಳು

H.D.Deve Gowda Atal bihari vajpayee ಸ್ವಭಾವ ರಾಮ ಮಂದಿರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ