ಇಷ್ಟಕ್ಕೆಲ್ಲಾ ಆತ್ಮಹತ್ಯೆ ಮಾಡ್ಕೋತಾರಾ?

A woman committed suicide for a silly reason

16-08-2018

ಬೆಂಗಳೂರು: ನಗರ ಜೀವನಕ್ಕೆ ಮಾರು ಹೋಗಿದ್ದ ಮಹಿಳೆಯೊಬ್ಬರು ಹಳ್ಳಿಗೆ ಹೋಗಿ ವಾಸಿಸಲು ಇಷ್ಟವಿಲ್ಲದೆ ನೊಂದು ನೇಣಿಗೆ ಶರಣಾಗಿರುವ ದುರ್ಘಟನೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಾಜರಾಜೇಶ್ವರಿ ನಗರದ ನಂದಿನಿ ಆಹ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದಾರೆ. ಮೂರು ವರ್ಷಗಳ ಹಿಂದೆ ಚಾಮರಾಜನಗರ ಮೂಲದ ಮಂಜುನಾಥ್ ಜೊತೆ ನಂದಿನಿಗೆ ವಿವಾಹವಾಗಿತ್ತು.

ಸಾರಕ್ಕಿಯಲ್ಲಿ ಬೇಕರಿ ನಡೆಸುತ್ತಿದ್ದ ಮಂಜುನಾಥ್ ರಾಜರಾಜೇಶ್ವರ ನಗರದಲ್ಲಿ ವಾಸಿಸುತ್ತಿದ್ದರು. ನಂದಿನಿಗೆ ಸಿಟಿಯಲ್ಲಿ ಇರಬೇಕೆಂದು ಇಷ್ಟವಿತ್ತು. ಆದರೆ ಪತಿ ಮಂಜುನಾಥ್ ಹಳ್ಳಿಯಲ್ಲಿ ತಾಯಿ ಒಂಟಿಯಾಗಿದ್ದಾರೆ ಎಂದು ಹಳ್ಳಿಗೆ ತೆರಳಲು ನಿರ್ಧಾರ ಮಾಡಿ ಬೇಕರಿಯನ್ನು ಮಾರಾಟ ಮಾಡುತ್ತಿದ್ದರು.

ಮೃತ ನಂದಿನಿಗೆ ನಗರ  ಬಿಟ್ಟು ಹಳ್ಳಿಗೆ ಹೋಗಿ ವಾಸಿಸುವುದಕ್ಕೆ ಇಷ್ಟವಿರಲಿಲ್ಲ. ಇದೇ ವಿಚಾರಕ್ಕೆ ಪ್ರತಿದಿನ ದಂಪತಿ ನಡುವೆ ಜಗಳವಾಗುತ್ತಿತ್ತು. ಆದರೆ ಪತಿ ಮಂಜುನಾಥ್ ಸಿಹಿ ತಿನಿಸುಗಳ ಪ್ಯಾಕೇಟ್ ಡೆಲಿವರಿ ಕೊಟ್ಟು ಬರಲು ಹೋಗಿದ್ದ ವೇಳೆ ನಂದಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಪತಿ ಮಂಜುನಾಥ್ ಹಾಗೂ ಅತ್ತೆಯ ಕಿರುಕುಳದಿಂದ ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತ ನಂದಿನಿ ಪೋಕರು ಆರೋಪ ಮಾಡುತ್ತಿದ್ದಾರೆ. ಈ ಘಟನೆ ಸಂಬಂಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 


ಸಂಬಂಧಿತ ಟ್ಯಾಗ್ಗಳು

suicide Village ಜಗಳ ಜೀವನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ