ಗೌರಿ ಹತ್ಯೆ: ಆರೋಪಿಗಳಿಂದ ಬಯಲಾಯ್ತು ಮತ್ತಷ್ಟು ರಹಸ್ಯಗಳು!

gauri murder: one more secret reveal  from arrested accused

16-08-2018

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹಂತಕರಿಗೆ ನಗರದಲ್ಲಿ ಉಳಿದುಕೊಳ್ಳಲು ನೆರವಾಗಿದ್ದ ಆರೋಪಿಗಳೇ ಪದ್ಮಾವತ್ ಸಿನಿಮಾ ಬಿಡುಗಡೆ ವೇಳೆ ಕರ್ನಾಟಕದಲ್ಲಿ ದಂಗೆ ನಡೆಸಲು ಸಂಚು ರೂಪಿಸಿದ್ದ ಆತಂಕಕಾರಿ ಸಂಗತಿ ವಿಶೇಷ ತನಿಖಾ ತಂಡ(ಎಸ್‍ಐಟಿ) ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ದೀಪಿಕಾ ಪಡುಕೋಣೆ ಹಾಗೂ ರಣವೀರ್ ಕಪೂರ್ ಅಭಿನಯದಲ್ಲಿ ಮೂಡಿಬಂದಿದ್ದ ಪದ್ಮಾವತ್ ಸಿನಿಮಾ ಬಿಡುಗಡೆ ವೇಳೆ ದೇಶಾದ್ಯಂತ ಭಾರಿ ಪ್ರತಿಭಟನೆ ವ್ಯಕ್ತವಾಗಿತ್ತು. ಈ ವೇಳೆ ರಾಜ್ಯದ ಹಲವೆಡೆಗಳಲ್ಲೂ  ದಂಗೆ ನಡೆಸಲು ಸಿದ್ಧತೆ ನಡೆಸಲಾಗಿತ್ತು. ಗೌರಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳು ದಂಗೆಗೆ ಈ ಸಂಚು ರೂಪಿಸಿದ್ದರು ಎನ್ನುವುದು ತನಿಖೆಯಲ್ಲಿ ಕಂಡುಬಂದಿದೆ ಎಂದು ಎಸ್‍ಐಟಿ ಮೂಲಗಳು ತಿಳಿಸಿವೆ.

ರಾಜ್ಯದ ಹುಬ್ಬಳ್ಳಿ, ಬೆಳಗಾವಿ ಹಾಗೂ ಶಿವಮೊಗ್ಗ ಸೇರಿದಂತೆ ಇನ್ನಿತರ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸೋಗಿನಲ್ಲಿ ತೆರಳಿ ಪೆಟ್ರೋಲ್ ಬಾಂಬ್ ಎಸೆದು ದಂಗೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಹಿಂದೂ ವಿರೋಧಿ ಅಂಶಗಳು ಹಾಗೂ ಕಥೆಯನ್ನೊಳಗೊಂಡಿರುವ ವಿವಾದ್ಮಾತಕ ಚಿತ್ರದ ವಿರುದ್ಧ ಆರೋಪಿಗಳು ಸಿಡಿದೆದ್ದಿದ್ದರು. ಹೀಗಾಗಿ ತಂಡ ಕಟ್ಟಿಕೊಂಡು ಪೆಟ್ರೋಲ್ ಬಾಂಬ್ ಸಿಡಿಸುವ ಸ್ಥಳವನ್ನು ನಿಗದಿಪಡಿಸಿದ್ದರು. ಆದರೆ ಎಸ್‍ಐಟಿ ಅಧಿಕಾರಿಗಳು ಮೊದಲ ಆರೋಪಿಯನ್ನ ಬಂಧಿಸುತ್ತಿದ್ದಂತೆ ಈ ಯೋಜನೆ ಕೈಬಿಡಲಾಗಿದೆ ಎಂದು ಎಸ್‍ಐಟಿ ಉನ್ನತ ಮೂಲಗಳು ಖಚಿತಪಡಿಸಿವೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ