ಅಂಧರ ಬಾಳಿಗೆ ಬೆಳಕಾದ ಪಾರ್ವ ತಮ್ಮ ರಾಜ್‍ಕುಮಾರ್ !

Kannada News

31-05-2017

ಬೆಂಗಳೂರು:- ಬುಧವಾರ ನಿಧನರಾದ ಪಾರ್ವತಮ್ಮ ರಾಜ್‍ಕುಮಾರ್ ಅವರು ತಮ್ಮ ಎರಡು ಕಣ್ಣುಗಳನ್ನೂ ದಾನ ಮಾಡುವ ಮೂಲಕ ಸಾವಿನ ನಂತರವೂ ಇಬ್ಬರು ಅಂಧರ ಬಾಳಿಗೆ ಬೆಳಕಾಗಿದ್ದಾರೆ. ಇಂದು ಬೆಳಗಿನ ಜಾವ ನಿಧನರಾದ ಪಾರ್ವತಮ್ಮ ರಾಜ್‍ಕುಮಾರ್ ಅವರ ಕಣ್ಣುಗಳನ್ನು ನಾರಾಯಣ ನೇತ್ರಾಲಯದವರು ಪಡೆದರು. ಡಾ.ರಾಜ್‍ರವರು ಜೀವಂತವಿದ್ದಾಗ ನಾನು ನನ್ನ ಹೆಂಡತಿ, ಮಕ್ಕಳು, ಮೊಮ್ಮಕ್ಕಳು, ನನ್ನ ಕುಟುಂಬದ ಎಲ್ಲರೂ ನೇತ್ರದಾನ ಮಾಡುವುದಾಗಿ ತಿಳಿಸಿದ್ದರು. ಅದರಂತೆ ಡಾ.ರಾಜ್‍ಕುಮಾರ್ ಮೃತರಾದ ನಂತರ ಅವರ ನೇತ್ರಗಳನ್ನೂ ದಾನ ಮಾಡಲಾಗಿತ್ತು. ಇಂದು ಪಾರ್ವತಮ್ಮ ರಾಜ್‍ಕುಮಾರ್ ಸಾವನ್ನಪ್ಪಿದ ತಕ್ಷಣ ಅವರ ಕುಟುಂಬದವರು ನಾರಾಯಣ ನೇತ್ರಾಲಯದ ವೈದ್ಯರಾದ ಭುಜಂಗಶೆಟ್ಟಿಯವರಿಗೆ ತಿಳಿಸಿದ ಕೂಡಲೇ ಅವರು ಆಗಮಿಸಿ ಪಾರ್ವತಮ್ಮನವರ ನೇತ್ರಗಳನ್ನು ಪಡೆದರು. ನಾರಾಯಣ ನೇತ್ರಾಲಯದಲ್ಲಿ ಡಾ.ರಾಜ್‍ಕುಮಾರ್ ಅವರ ಹೆಸರಿನಲ್ಲಿ ಐ ಬ್ಯಾಂಕ್ ಸ್ಥಾಪಿಸಲಾಗಿದ್ದು, ಆ ಮೂಲಕ ಅಂಧರ ಬಾಳಿಗೆ ಬೆಳಕು ನೀಡಲಾಗುತ್ತಿದೆ. ಇಂದು ಪಾರ್ವತಮ್ಮನವರ ಕಣ್ಣುಗಳನ್ನು ದಾನ ನೀಡುವ ಮೂಲಕ ಅಂಧರ ಬಾಳಿಗೆ ಬೆಳಕಾಗಿದ್ದಾರೆ ಎಂದು ವೈದ್ಯರಾದ ಡಾ.ಭುಜಂಗಶೆಟ್ಟಿ ತಿಳಿಸಿದರು.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ