ರಾಜ್ಯದಲ್ಲಿ ದಿನಗೂಲಿ ಸರ್ಕಾರ: ಸಿ.ಟಿ.ರವಿ

BJP Mla C.T.Ravi allegation on state government

16-08-2018

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಶಾಸಕ ಸಿ.ಟಿ.ರವಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿಧಾನಸೌಧದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಆಡಳಿತ ಪಕ್ಷದ 17 ಶಾಸಕರು ರಾಜೀನಾಮೆಗೆ ಮುಂದಾಗಿದ್ದಾರೆಂದು ಮಾಧ್ಯಮಗಳಲ್ಲಿ ವರದಿಗಳು ಬರುತ್ತಿವೆ’. ಈ ಸರ್ಕಾರ ಮಳೆ ಅನಾಹುತ ಪ್ರದೇಶಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸುತ್ತಿಲ್ಲ. ಸಂತ್ರಸ್ತ ಜನರ ನೆರವಿಗೆ ಸರ್ಕಾರ ಧಾವಿಸುತ್ತಿಲ್ಲ. ಮಲೆನಾಡಿನಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಆದರೆ, ಯಾವುದಕ್ಕೂ ಸಂಬಂಧ ಇಲ್ಲದಂತೆ ಸಿಎಂ ತೀರ್ಥ ಯಾತ್ರೆ ಹೊರಟಿದ್ದಾರೆ’ ಎಂದು ಟೀಕೆ ಮಾಡಿದ್ದಾರೆ.

ತೀವ್ರ ಮಳೆಯಿಂದ ಅನಾಹುತಗಳಾಗುತ್ತಿರುವ ಪ್ರದೇಶಗಳಲ್ಲಿ ಆಯಾ ಜಿಲ್ಲಾಧಿಕಾರಿಗಳು ಟೊಂಕ ಕಟ್ಟಿ ನಿಲ್ಲಬೇಕು, ಸಂತ್ರಸ್ಥರ ನೆರವಿಗೆ ಅಧಿಕಾರಿಗಳು ಬರಬೇಕು ಎಂದು ಒತ್ತಾಯಿಸಿದ್ದಾರೆ. ಚುನಾವಣಾ ಆಯೋಗ ಕೂಡ ಶಿವಮೊಗ್ಗ, ಮಂಗಳೂರು, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸ್ಥಳೀಯ ಚುನಾವಣೆ ಮುಂದೂಡಲಿ’ ಎಂದು ಶಾಸಕ ಸಿ.ಟಿ.ರವಿ ಆಗ್ರಹಿಸಿದ್ದಾರೆ.

‘ರಾಜ್ಯದಲ್ಲಿ ದಿನಗೂಲಿ ಸರ್ಕಾರ ಇದೆ. ಇವತ್ತಿನದು ಇವತ್ತು ಮುಗಿದು ಹೋದರೆ ಸಾಕಾಗಿದೆ ಎಂಬಂತಿದೆ ಸರ್ಕಾರ’  ಒಂದೇ ವೇದಿಕೆಯಲ್ಲಿ ಸಿದ್ದರಾಮಯ್ಯ, ಕುಮಾರಸ್ವಾಮಿ ಮುಖ‌ ನೋಡದ ಸ್ಥಿತಿಯಲ್ಲಿದ್ದಾರೆ. ಇದು ಸರ್ಕಾರದ ಸಮನ್ವಯದ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು ಎಂದು ಊಹಿಸಬಹುದು' ಎಂದು ಸಿ.ಟಿ‌.ರವಿ ವಾಗ್ದಾಳಿ ನಡೆಸಿದರು.


ಸಂಬಂಧಿತ ಟ್ಯಾಗ್ಗಳು

C.T.Ravi Kumaraswamy ಅನಾಹುತ ವಿಶೇಷ ಪ್ಯಾಕೇಜ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ