ನಾಳೆ ಮಹದಾಯಿ ಹೋರಾಟಗಾರರ ಬೃಹತ್ ಸಮಾವೇಶ

The massive convention of Mahadevi fighters tomorrow!

16-08-2018

ಹುಬ್ಬಳ್ಳಿ: ಮಹದಾಯಿ ನ್ಯಾಯಾಧಿಕರಣ ತೀರ್ಪು ಪ್ರಕಟಿಸಿದ ಬೆನ್ನಲ್ಲೇ, ಅವಶ್ಯಕತೆಗೆ ತಕ್ಕಷ್ಟು ನೀರು ಸಿಗದ ಸಂಬಂಧ ಮಹದಾಯಿ ಹೋರಾಟಗಾರರು ನಾಳೆ ಬೃಹತ್ ಸಮಾವೇಶ ನಡೆಸಲಿದ್ದಾರೆ. ನಾಳೆ ಬೆಳಿಗ್ಗೆ 11:30ಕ್ಕೆ ಹುಬ್ಬಳ್ಳಿ ನಗರದ ಕಾಟನ್ ಮಾರ್ಕೆಟ್ ನಲ್ಲಿರುವ ಸಾಂಸ್ಕೃತಿಕ ಭವನದಲ್ಲಿ ಸಮಾವೇಶ ಆಯೋಜಿಸಿದ್ದು, ಸಾವಿರಾರು ರೈತರು, 40ಕ್ಕೂ ಹೆಚ್ಚು ಸಂಘಟನೆಗಳ ಕಾರ್ಯಕರ್ತರು, ಉತ್ತರ ಕರ್ನಾಟಕ ಭಾಗದ ಜನ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ, ಮಠಾಧೀಶರೂ ಸಹ ಭಾಗಿಯಾಗುವ ಸಾಧ್ಯತೆ ಇದೆ.

ಮಹದಾಯಿ ವಿಚಾರದಲ್ಲಿ ತಾರ್ಕಿಕ ‌ಅಂತ್ಯ ಕಂಡುಕೊಳ್ಳುವ ಉದ್ದೇಶದಿಂದ ಸಮಾವೇಶ ಆಯೋಜಿಸಿದ್ದು, ಬೇಡಿಕೆಯಾಗಿದ್ದಂತಹ 36.5 ಟಿಎಂಸಿ ಪೈಕಿ 13.5 ಟಿಎಂಸಿ ನೀರು ಬಿಡುವಂತೆ ತೀರ್ಪು ನೀಡಿದೆ ನ್ಯಾಯಾಧಿಕರಣ. ಇನ್ನೂ ಬರಬೇಕಾದ 23 ಟಿಎಂಸಿ ನೀರು ಹೇಗೆ ಪಡೆಯುವುದು..? ರಾಜ್ಯ ಸರ್ಕಾರಕ್ಕೆ ಹೋರಾಟಗಾರರು ಯಾವ ರೀತಿಯ ಒತ್ತಡ ತರಬೇಕು..? ಹಂಚಿಕೆಯಾದ ನೀರಿನ ಸಂಬಂಧ ರಾಜ್ಯ ಸರ್ಕಾರ ತಕ್ಷಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಯಲಿದ ಎಂದು ತಿಳಿದು ಬಂದಿದೆ.


ಸಂಬಂಧಿತ ಟ್ಯಾಗ್ಗಳು

Mahadayi farmers ತೀರ್ಪು ಸಾಂಸ್ಕೃತಿಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ