ನದಿ ತೀರದ ಪ್ರವಾಸಿ ತಾಣಗಳ ಬಳಿ ಪೊಲೀಸರ ಕಟ್ಟೆಚ್ಚರ

police security near dam and river shore

16-08-2018

ಮಂಡ್ಯ: ಮಡಿಕೇರಿಯಲ್ಲಿ ಭಾರೀ ಮಳೆ ಹಿನ್ನೆಲೆ, ಕೆ.ಆರ್.ಎಸ್. ಜಲಾಶಯದ ಒಳಹರಿವಿನ ಪ್ರಮಾಣವೂ ಹೆಚ್ಚಾಗಿದೆ. ಆದ್ದರಿಂದ ಎರಡನೇ ದಿನವು ಜಲಾಶಯದಿಂದ ನದಿಗೆ 1.22 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಇದರಿಂದ ಕೆ.ಆರ್.ಎಸ್.ಜಲಾಶಯದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಮುಂಜಾಗ್ರತಾ ಕ್ರಮವಾಗಿ ಇಂದು ಕೂಡ ಪಾಂಡವಪುರ ತಾಲ್ಲೂಕಿನ ಎಣ್ಣೆಹೊಳೆಕೊಪ್ಪಲು ಗ್ರಾಮದ ಅಂಗನವಾಡಿ ಮತ್ತು ಶಾಲೆಗೆ ರಜೆ ಘೋಷಿಸಲಾಗಿದೆ.  ಪಶ್ವಿಮ ವಾಹಿನಿ ಬಳಿ ಹಲವು  ದೇವಾಲಯಗಳು ಜಲಾವೃತವಾತವಾಗಿದ್ದು ಪೂಜೆ ಸ್ಥಗಿತಗೊಂಡಿದೆ. ನದಿ ತೀರದ ಪ್ರವಾಸಿ ತಾಣಗಳ ಬಳಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Rivers Dams ದೇವಾಲಯ ಕೆ.ಆರ್.ಎಸ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ