ಮಹದಾಯಿ ತೀರ್ಪು: ‘ಸ್ವಲ್ಪ ಮಟ್ಟಿಗೆ ರಾಜ್ಯಕ್ಕೆ ನ್ಯಾಯ ಸಿಕ್ಕಿದೆ’

14-08-2018
ಬೆಂಗಳೂರು: ಮಹದಾಯಿ ತೀರ್ಪಿನ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಪ್ರತಿಕ್ರಿಯಿಸಿದ್ದು, 'ಮಹದಾಯಿ ನ್ಯಾಯಾಧಿಕರಣ ತೀರ್ಪು ಸ್ವಲ್ಪ ಮಟ್ಟಿಗೆ ರಾಜ್ಯಕ್ಕೆ ನ್ಯಾಯ ಸಿಕ್ಕಿದೆ ಎಂದಿದ್ದಾರೆ. ನಾವು ಕುಡಿಯುವ ನೀರಿಗಾಗಿ ಕೇಳಿದ್ದು 7.5 ಟಿಎಂಸಿ ನೀರು, ಕೊಟ್ಟಿದ್ದು ಬರೀ ನಾಲ್ಕು ಟಿಎಂಸಿ ನೀರು. 36 ಟಿಎಂಸಿ ನೀರು ಕೇಳಿದ್ದೆವು ಅದರಲ್ಲಿ 13 ಟಿಎಂಸಿ ನೀರು ಕೊಟ್ಟಿದ್ದಾರೆ. ಇದು ಸಂತೃಪ್ತಿ ತೀರ್ಪು ಅಲ್ಲದಿದ್ದರು ನಮ್ಮ ಹಕ್ಕು ಇದೆ ಅಂತ ಹೋರಾಟ ಮಾಡಿದ್ದಕ್ಕೆ ಕೋರ್ಟ್ ಒಪ್ಪಿದೆ. ಹೋರಾಟಗಾರರೆಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.
ಕೇಂದ್ರ ಮಧ್ಯಪ್ರವೇಶ ಮಾಡಿ ನ್ಯಾಯ ಕೊಡಿಸಲಿಲ್ಲ. ರಾಜ್ಯದ ಬಿಜೆಪಿ ನಾಯಕರು ಒಂದು ತಿಂಗಳಲ್ಲಿ ಪರಿಹಾರ ಮಾಡುತ್ತೇವೆ ಎಂದು ಹೇಳಿದ್ದರು. ಅಮಿತ್ ಷಾ ಮತ್ತು ಮೋದಿ ಚುನಾವಣೆ ಬಳಿಕ ರಾಜ್ಯದ ಕಡೆ ತಿರುಗಿಯೂ ನೋಡಲಿಲ್ಲ ಎಂದು ಟೀಕಿಸಿದ್ದಾರೆ.
ಕಾನೂನು ಸಲಹೆಗಾರರ ಅಭಿಪ್ರಾಯ ಪಡೆದು ಮುಂದಿನ ಹೋರಾಟದ ಬಗ್ಗೆ ಸರ್ಕಾರ ನಿರ್ಧಾರ ಮಾಡಲಿ, ಸದ್ಯಕ್ಕೆ ನಮಗೂ ಸಹ ನ್ಯಾಯ ಸಿಕ್ಕಿದೆ ಎಂದರು.
ಒಂದು ಕಮೆಂಟನ್ನು ಹಾಕಿ