ಮಹದಾಯಿ ತೀರ್ಪು: ‘ನೂರಕ್ಕೆ ನೂರರಷ್ಟು ಸಮಾಧಾನ ತಂದಿಲ್ಲ’14-08-2018

ಬೆಂಗಳೂರು: ‘ಮಹದಾಯಿ ತೀರ್ಪು ನೂರಕ್ಕೆ ನೂರರಷ್ಟು ಸಮಾಧಾನ ತಂದಿಲ್ಲ’ ಎಂದು ಹಂಗಾಮಿ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದ್ದಾರೆ. ಮಹದಾಯಿ ತೀರ್ಪು ಕುರಿತು ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ‘ಮಹದಾಯಿ ಅಂತಿಮ ತೀರ್ಪು ನೂರಕ್ಕೆ ನೂರರಷ್ಟು ಸಮಾಧಾನ ತಂದಿಲ್ಲ, ಸ್ವಲ್ಪಮಟ್ಟಿಗೆ ಸಮಾಧಾನ ತಂದಿದೆ’ ಎಂದರು. ಗೋವಾದ ನಿಲುವಿನ ಬಗ್ಗೆ ವಿಚಾರ ಮಾಡಿದರೆ ಇಂದಿನ ತೀರ್ಪು ಕೊಂಚ ಸಮಾಧಾನ, ಮುಂದಿನ ಹೋರಾಟದ ಮೂಲಕ ಹೆಚ್ಚಿನ ನೀರು ಪಡೆಯಲು ಪ್ರಯತ್ನ ಮಾಡಲಾಗುವುದು. ಇನ್ಮುಂದೆ ರೈತರು ಹೋರಾಟ ಮಾಡುವುದು ಬೇಡ. ಸರ್ಕಾರವೇ ಈ ಬಗ್ಗೆ ಹೋರಾಟ ಮಾಡಿ ನೀರು ಪಡೆಯುವ ಪ್ರಯತ್ನ ಮಾಡುತ್ತೇವೆ. ಅಖಂಡ ಕರ್ನಾಟಕದ ಜನರ ಹೋರಾಟದ ಪರಿಣಾಮ ಈ ನೀರು ಸಿಕ್ಕಿದೆ. ವ್ಯರ್ಥವಾಗಿ ಹೋಗುವ ನೀರನ್ನು ರಾಜ್ಯಕ್ಕೆ ಪಡೆಯಲು ಪ್ರಯತ್ನಿಸಬೇಕು. ಇಂದಿನ ತೀರ್ಪು ಉಸಿರಾಡುವಂತೆ ಆಗಿದೆ ಎಂದರು.

ನ್ಯಾಯಾಧಿಕರಣಕ್ಕೆ ಸರ್ಕಾರ ಅಭಿನಂದನೆ ಸಲ್ಲಿಸಿ ಮುಂದಿನ ತಮ್ಮ ಹಕ್ಕು ಪ್ರತಿಪಾಧಿಸಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು ಸಭಾಪತಿ ಹೊರಟ್ಟಿ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ