ದರೋಡೆಗೆ ಹೊಂಚು ಹಾಕಿ ಕುಳಿತಿದ್ದ ನೇಪಾಳಿ ಗ್ಯಾಂಗ್ ಅರೆಸ್ಟ್

Nepali gang 6 members arrested

14-08-2018

ಬೆಂಗಳೂರು: ಮಚ್ಚು-ಲಾಂಗು, ರಾಡ್‍ಗಳನ್ನು ಹಿಡಿದು ದರೋಡೆಗೆ ಸಜ್ಜಾಗಿ ಹೊಂಚು ಹಾಕಿ ಕುಳಿತಿದ್ದ ನೇಪಾಳ ಗ್ಯಾಂಗ್‍ನ 6 ಮಂದಿಯನ್ನು ಕೊತ್ತನೂರು ಪೊಲೀಸರು ಬಂಧಿಸಿದ್ದಾರೆ.

ಕೊತ್ತನೂರಿನ ದಿಲ್ ಬಹದ್ದೂರ್ (41), ಗಂಗಾ ಬಹದ್ದೂರ್ ಕಟ್ಟಾಯ್ (42), ಜವೇರಿಯಾ ಬಹುದ್ದೂರ್ ಕಟ್ಟಾಯಿತ್ (45) ಗಾಂಧಿನಗರದ ಲಾಲ್‍ ಬಹದ್ದೂರ್ (26), ದೇವನಹಳ್ಳಿಯ ಮನೋಜ್ ಕುಮಾರ್ (48), ಸಿಂಗ್ನಹಳ್ಳಿಯ ಭರತ್ ಬಹದ್ದೂರ್ ಕಟ್ಟಾಯ್ (36) ಬಂಧಿತ ಆರೋಪಿಗಳಾಗಿದ್ದಾರೆ.

ಇವರೆಲ್ಲರೂ ನೇಪಾಳ ಮೂಲದವರಾಗಿದ್ದು, ಸೆಕ್ಯುರಿಟಿಗಾರ್ಡ್ ಇನ್ನಿತರ ಕೂಲಿ ಕೆಲಸ ಅರಸಿ ನಗರಕ್ಕೆ ಬಂದಿದ್ದರು. ಐಷಾರಾಮಿ ಜೀವನಕ್ಕಾಗಿ ದರೋಡೆಗಿಳಿದಿದ್ದ ಆರೋಪಿಗಳು, ವಾಹನಸಾವರರು ಹಾಗೂ ಒಂಟಿಯಾಗಿ ಓಡಾಡುವವರನ್ನು ಗುರಿಯಾಗಿಸಿಕೊಂಡು ಕೃತ್ಯ ನಡೆಸುತ್ತಿದ್ದರು ಎಂದು ಡಿಸಿಪಿ ಕಲಾಕೃಷ್ಣಸ್ವಾಮಿ ತಿಳಿಸಿದ್ದಾರೆ.

ಆರೋಪಿಗಳಿಂದ 2 ಲ್ಯಾಪ್ ಟಾಪ್, ಮಚ್ಚು, ರಾಡ್, ಇನ್ನಿತರ ಮಾರಕಾಸ್ತ್ರಗಳನ್ನ ವಶಪಡಿಸಿಕೊಳ್ಳಲಾಗಿದೆ. ಚಿಕ್ಕಗುಬ್ಬಿಯ ನೀಲಗಿರಿ ತೋಪಿನ ನಿರ್ಜನ ಪ್ರದೇಶದಲ್ಲಿ ಗ್ಯಾಂಗ್ ದರೋಡೆಗೆ ಹೊಂಚು ಹಾಕಿ ಕುಳಿತಿದ್ದಾಗ ಕಾರ್ಯಾಚರಣೆ ನಡೆಸಿದ ಕೊತ್ತನೂರು ಪೊಲೀಸ್ ಇನ್ಸ್ಪೆಕ್ಟರ್ ಹರಿಯಪ್ಪ ಮತ್ತವರ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿ, ಪ್ರಕರಣ  ದಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Nepali gang robbery ಮಾರಕಾಸ್ತ್ರ ನಿರ್ಜನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ