ಪ್ರಧಾನಿ ಮೋದಿ ಯು ಟರ್ನ್ ತೆಗೆದುಕೊಂಡಿದ್ದಾರೆ !

Kannada News

31-05-2017

ಮೈಸೂರು:- ಜಿ.ಎಸ್.ಟಿ ಮಸೂದೆ ಹಿಂದಿನ ಯುಪಿಎ ಸರ್ಕಾರದ ಪ್ರತಿಫಲವಾಗಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಜಿ.ಎಸ್.ಟಿ ಮಸೂದೆಯನ್ನು ಗುಜರಾತ್ ಸಿ.ಎಂ ಆಗಿದ್ದ ನರೇಂದ್ರ ಮೋದಿ ಅವರು ವಿರೋಧಿಸಿದ್ದರು. ಆದರೆ ಇದೀಗ ಯುಪಿಎ ಸರ್ಕಾರದ ಅವಧಿಯ ಜಿ.ಎಸ್.ಟಿ ಮಸೂದೆಯನ್ನು ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ಅನುಷ್ಠಾನಕ್ಕೆ ತರಲಾಗುತ್ತಿದೆ. ಈ ಮೂಲಕ ಪ್ರಧಾನಿ ಮೋದಿ, ಯು ಟರ್ನ್ ತೆಗೆದುಕೊಂಡಿದ್ದಾರೆಂದು ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಕಾರ್ಯ ಕ್ರಮವೊಂದರಲ್ಲಿ ಗೋ ಹತ್ಯೆ ನಿಷೇಧ ಕುರಿತಂತೆ ಪ್ರತಿಕ್ರಿಯಿಸಿದ ಅವರು, ವಧೆಗಾಗಿ ಗೋವುಗಳನ್ನು ಮಾರಾಟ ಮಾಡುವುದಕ್ಕೆ ನಿರ್ಭಂಧ ವಿಧಿಸುವ ಕಾಯ್ದೆ ಜಾರಿಗೆ ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮವನ್ನು ತರಾಟೆಗೆ ತೆಗೆದುಕೊಂಡರು. ಕೇಂದ್ರ ಸರ್ಕಾರ ಈ ಮೂಲಕ ಜನರ ಆಹಾರ ಪದ್ದತಿಯ ವಿರುದ್ಧ ಆಕ್ರಮಣ ನಡೆಸಿದೆ ಎಂದರು. ಸಂಬಂಧಪಟ್ಟ ಕಾಯ್ದೆ ಜಾರಿಗೆ ಕುರಿತ ಪ್ರತಿ ರಾಜ್ಯ ಸರ್ಕಾರಕ್ಕೆ ಲಭ್ಯವಾದ ನಂತರ ಕಾನೂನು ಹೋರಾಟ ಆರಂಭಿಸುವ ಚಿಂತನೆಯಿದೆ ಎಂದರು.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ