ಗಾಂಜಾ ಮಾರುತ್ತಿದ್ದ 7 ಮಂದಿ ಬಂಧನ

ganja selling :7 people arrested

14-08-2018

ಬೆಂಗಳೂರು: ಶ್ರೀರಾಂಪುರ, ಆರ್.ಟಿ.ನಗರ, ಯಶವಂತಪುರ ಇನ್ನಿತರ ಕಡೆಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ 7 ಮಂದಿಯನ್ನು ಬಂಧಿಸಿ 3 ಕೆಜಿ 700 ಗ್ರಾಂ ಗಾಂಜಾವನ್ನು  ಉತ್ತರ ವಿಭಾಗದ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಅಂದ್ರಹಳ್ಳಿಯ ಸದ್ದಾಂ (22), ತಿಗಳರಪಾಳ್ಯದ ಇಮ್ರಾನ್ ಅಹ್ಮದ್ (28), ಶ್ರೀರಾಂಪುರದ ಸತೀಶ (25), ರಾಜಗೋಪಾಲ್ ನಗರದ ರಾಂ ಪ್ರಸಾದ್ ಅಲಿಯಾಸ್ ಚೀನು (22), ಸಂತೋಷ್ (23) ಹಾಗೂ ಉಲ್ಲಾಳ ಉಪನಗರದ ಮೊಹ್ಮದ್ ಸಲ್ಮಾನ್ (20) ಬಂಧಿತ ಆರೋಪಿಗಳಾಗಿದ್ದಾರೆ.

ಆರೋಪಿಗಳು ಆರ್ಎಂಸಿ ಯಾರ್ಡ್, ನಂದಿನಿ ಲೇಔಟ್, ಶ್ರೀರಾಂಪುರ, ಆರ್.ಟಿ.ನಗರ, ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ವ್ಯವಸ್ಥಿತವಾಗಿ ಗಾಂಜಾ ಮಾರಾಟದಲ್ಲಿ ತೊಡಗಿದ್ದರು. ಆರೋಪಿಗಳಿಂದ 3 ಕೆಜಿ 700 ಗ್ರಾಂ ಗಾಂಜ ವಶಪಡಿಸಿಕೊಳ್ಳಲಾಗಿದೆ. ಆಂಧ್ರ ಸೇರಿದಂತೆ ಇತರೆ ಕಡೆಗಳಿಂದ ನಗರಕ್ಕೆ ಗಾಂಜಾ ತಂದು ಚಿಕ್ಕ ಪ್ಯಾಕೆಟ್‍ಗಳಲ್ಲಿ ಕಟ್ಟಿ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿಯಾಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ.


ಸಂಬಂಧಿತ ಟ್ಯಾಗ್ಗಳು

ganja arrested ವ್ಯವಸ್ಥಿತ ಮಾಹಿತಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ