ಏರ್ ಷೋ ಸ್ಥಳಾಂತರಗೂಳ್ಳಬಾರದು: ಎನ್ಎಸ್ಯುಐ

Air Show should not be moved from bengaluru: NSUI

14-08-2018

ಬೆಂಗಳೂರು: ಏರ್ ಷೋ ಬೆಂಗಳೂರಿನಿಂದ ಸ್ಥಳಾಂತರ ವಿಚಾರ ಕುರಿತು ಪ್ರತಿಭಟನೆಗಳು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿವೆ. ಯಾವುದೇ ಕಾರಣಕ್ಕೂ ಏರ್ ಷೋ ಸ್ಥಳಾಂತರಗೂಳ್ಳಬಾರದು ಎಂದು ಎನ್ಎಸ್ಯುಐ ಸಂಘಟನೆ ಇಂದು ಹೆಬ್ಬಾಳದ ಎಸ್ಟೀಮ್ ಮಾಲ್ ಮುಂದೆ ಪ್ರತಿಭಟನೆ ನಡೆಸಿದೆ. ಮೋದಿ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ. ಖಾಸಗಿ ವ್ಯಕ್ತಿಗಳ ಲಾಭಕ್ಕೆ ರಾಜ್ಯದ ಹೆಚ್‌ಎಎಲ್ ಅನ್ನು ಸೈಡ್ ಲೈನ್ ಮಾಡಿದರು, ಇದೀಗ ರಾಜ್ಯದ ಹೆಮ್ಮೆಯ ಏರ್ ಷೋ ಕೂಡ ಶಿಫ್ಟ್ ಮಾಡುತ್ತಿದ್ದಾರೆ ಎಂದು ಪ್ರಧಾನಿ‌ ಮೋದಿ, ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಏರ್ ಷೋ ಸ್ಥಳಾಂತರಗೂಳ್ಳಬಾರದು ಎಂದು ಒತ್ತಾಯಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ