ಉಕ್ಕಿ ಹರಿಯುತ್ತಿದೆ ಲಕ್ಷ್ಮಣ ತೀರ್ಥ ನದಿ

Lakshman Tirtha River overflowing

14-08-2018

ಮಡಿಕೇರಿ: ದಕ್ಷಿಣ ಕೊಡಗಿನಲ್ಲೂ ಮಳೆಯ ಆರ್ಭಟ ಮುಂದುವರಿದಿದೆ. ಭಾರೀ ಮಳೆಗೆ ಉಕ್ಕಿ ಹರಿಯುತ್ತಿದೆ ಲಕ್ಷ್ಮಣ ತೀರ್ಥ ನದಿ. ಇನ್ನು ಜಿಲ್ಲೆಯಲ್ಲಿ ಮಳೆ ಅವಾಂತರಗಳನ್ನೇ ಸೃಷ್ಟಿಸಿದೆ. ಜಿಲ್ಲೆಯ ನಿಟ್ಟೂರು ಸುತ್ತಮುತ್ತಲಿನ ಗದ್ದೆ ಪ್ರದೇಶಗಳು ಜಲಾವೃತಗೊಂಡಿವೆ. ಪ್ರವಾಹ ಪರಿಸ್ಥಿತಿಯಿಂದ ಆತಂಕದಲ್ಲಿದ್ದಾರೆ ಗ್ರಾಮಸ್ಥರು. ಮೈಸೂರು-ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಪ್ರಮಾಣದ ಗುಡ್ಡಗಳು ಕುಸಿದಿದ್ದು, ಎರಡನೇ ದಿನವೂ ಕೂಡ ಮಣ್ಣು ತೆರವು ಕಾರ್ಯ ಮುಂದುವರೆದಿದೆ. 7 ಜೆಸಿಬಿಗಳಿಂದ ಮಣ್ಣು ತೆರವು ಕಾರ್ಯ ನಡೆಯುತ್ತಿದೆ. ಗುಡ್ಡ ಕುಸಿತದಿಂದ ಎರಡು ದಿನಗಳಿಂದ ಮಂಗಳೂರು-ಕೊಡಗು ರಸ್ತೆ ಸಂಪರ್ಕ ಕಡಿತಗೊಂಡಿದೆ. ಸುಂಟಿಕೊಪ್ಪ-ಚೆಟ್ಟಳ್ಳಿ ರಸ್ತೆಯಲ್ಲಿ ದೊಡ್ಡ ಗಾತ್ರದ ಮರಗಳು ಧರೆಗುರುಳಿವೆ. ಒಟ್ಟಾರೆ ಮಲೆನಾಡಿನಲ್ಲಿ ಸುರಿಯುತ್ತಿರುವ ಮಳೆ ಜನರನ್ನು ಕಂಗೆಡಿಸಿದೆ.


ಸಂಬಂಧಿತ ಟ್ಯಾಗ್ಗಳು

Kodagu JCB ಮಣ್ಣು ತೆರವು ಆತಂಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ