ಒಂದೆಡೆ ಅಭಿಯಾನ ಮತ್ತೊಂದೆಡೆ ಟ್ರಾಫಿಕ್ ಕಿರಿಕಿರಿ!

heavy traffic jam at jayanagar due to an MlA

14-08-2018

ಬೆಂಗಳೂರು: ಪ್ಲಾಸ್ಟಿಕ್ ಹಾಗೂ ಕಸ ಮುಕ್ತ ಜಯನಗರ ಜಾಗೃತಿ ಅಭಿಯಾನಕ್ಕೆ ಜಯನಗರದ ಶಾಸಕಿ ಸೌಮ್ಯರೆಡ್ಡಿ ಚಾಲನೆ ನೀಡಿದ್ದು, ಅವರ ನೇತೃತ್ವದಲ್ಲಿಯೇ ಜಾಗೃತಿ ಅಭಿಯಾನ ಕೈಗೊಂಡಿದ್ದರು. ‘ಪ್ಲಾಸ್ಟಿಕ್ ಬಳಕೆ ಬೇಡ್ವೇ ಬೇಡ ಎಂಬ ಘೋಷಣೆಯೊಂದಿಗೆ ಜಾಗೃತಿ ಮೂಡಿಸಲು ಮುಂದಾಗಿದ್ದರು. 

ಇಂದು ನಡೆದ ಅಭಿಯಾನದಲ್ಲಿ ಎನ್.ಎಸ್.ಎಸ್ ಹಾಗೂ ಎನ್.ಸಿ.ಸಿ ವಿದ್ಯಾರ್ಥಿಗಳು, ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರರು ಸೇರಿದಂತೆ ಸ್ಥಳೀಯರು ಭಾಗಿಯಾಗಿದ್ದರು.  

ಈ ವೇಳೆ, ಮಾತನಾಡಿದ ಶಾಸಕಿ ಸೌಮ್ಯ ರೆಡ್ಡಿ, ಹೈಕೋಟ್೯ ಆದೇಶ ಬೆನ್ನೆಲ್ಲೆ ನಾನು ಮೊದಲೇ ಬ್ಯಾನರ್ ಗಳನ್ನ ತೆರವುಗೊಳಿಸಿದ್ದೆ. ನಾಳೆ ಸ್ವಾತಂತ್ರ್ಯದಿನಾಚರಣೆ ಹಿನ್ನೆಲೆ ನಾಳೆಯಿಂದಲೇ ನಗರದಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆಯಾಗಬೇಕು. ಪ್ಲಾಸ್ಟಿಕ್ ಮುಕ್ತ ಜಯನಗರ ನನ್ನ ಗುರಿ, ತುಂಬಾ ಜನರು ಪ್ಲಾಸ್ಟಿಕ್ ನ್ನು ಬಳಸುತ್ತಿದ್ದಾರೆ, ಇದನ್ನು ವಿರೋಧಿಸಿ ನಾಗರಿಕರು ಕೈ ಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.

ಪ್ಲಾಸ್ಟಿಕ್ ಬಳಕೆ ಕುರಿತು ಎನ್.ಜಿ.ಟಿ(ರಾಷ್ಟ್ರೀಯ ಹಸಿರು ನ್ಯಾಯಾಲಯ) ವಿಷಯ ಪ್ರಸ್ತಾಪಿಸಿದೆ, ‘ನಾನು ಸುಮಾರು ಬಾರಿ ನನ್ನ ಕ್ಷೇತ್ರದಲ್ಲಿನ ಅಂಗಡಿ, ಮಳಿಗೆಗಳಿಗೆ ಭೇಟಿ ಮಾಡಿದ್ದೇನೆ. ಅನಧಿಕೃತ ಪ್ಲಾಸಿಕ್ ಮಾರಾಟವನ್ನ ಪತ್ತೆ ಹಚ್ಚಿ, 5 ಸಾವಿರದಿಂದ 10 ಸಾವಿರದ ವರೆಗೆ ದಂಡ ವಿಧಿಸಿದ್ದೇವೆ. ಎಲ್ಲರಿಗೂ ಪರಿಸರದ ಬಗ್ಗೆ ಜಾಗೃತಿ ಬರಬೇಕು’ ಎಂದರು.

ಒಂದೆಡೆ ಸೌಮ್ಯರೆಡ್ಡಿ ಜಾಗೃತಿ ಅಭಿಯಾನ ಮಾಡುತ್ತಿದ್ದರೆ ಮತ್ತೊಂದೆಡೆ ವಾಹನ ಸವಾರರು ಹೈರಾಣಾಗಿದ್ದರು. ಕಾರಣ ಪ್ಲಾಸ್ಟಿಕ್ ಹಾಗೂ ಕಸ ಮುಕ್ತ ಜಯನಗರ ಅಭಿಯಾನದಿಂದ ಫುಲ್ ಟ್ರಾಫಿಕ್ ಜಾಮ್ ಆಗಿತ್ತು. ಕೂಡಲೆ ಟ್ರಾಫಿಕ್ ನಿಯಂತ್ರಿಸಲು ಆರು ಜನ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ಅಭಿಯಾನದ ಭದ್ರತೆಗೆ 15ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು, ಇಷ್ಟೆಲ್ಲಾ ಸಿಬ್ಬಂದಿಗಳಿದ್ದರೂ ವಾಹನ ಸವಾರರಿಗೆ ಮಾತ್ರ ತಪ್ಪಲಿಲ್ಲ ಟ್ರಾಫಿಕ್ ಕಾಟ. ಇದರಿಂದ ಅಭಿಯಾನ, ಸೇರಿದಂತೆ ಶಾಸಕಿ ಮೇಲೆ ಸಿಡುಕಿನಿಂದಲೇ ಟ್ರಾಫಿಕ್ ನಲ್ಲಿ ಪರದಾಡುವಂತಾಗಿತ್ತು ವಾಹನ ಸವಾರರ ಪರಿಸ್ಥಿತಿ.


ಸಂಬಂಧಿತ ಟ್ಯಾಗ್ಗಳು

Soumya Reddy Jayanagar ಜಾಗೃತಿ ಅಭಿಯಾನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ