ಬಾಲಕಿ ಅಪಹಣಕ್ಕೆ ಯತ್ನ: ಪೊಲೀಸರಿಂದ ರಕ್ಷಣೆ

Attempt to abduct girl: Protection from police

14-08-2018

ಗದಗ: ಬಿಸ್ಕೆಟ್ ನಲ್ಲಿ ಮತ್ತು ಬರುವ ಪದಾರ್ಥ ಬೆರೆಸಿ ಬಾಲಕಿಯನ್ನು ಅಪಹರಣಕ್ಕೆ ಯತ್ನಿಸಿದ ಘಟನೆ ಗದಗ್ ನಲ್ಲಿ ಬೆಳಕಿಗೆ ಬಂದಿದೆ. ಮೂವರು ಆಗಂತುಕರು ಬಾಲಕಿ ಅಪಹರಣಕ್ಕೆ ಯತ್ನಿಸಿದ್ದು, ಅದೃಷ್ಟವಶಾತ್ ಬಾಲಕಿ ಪಾರಾಗಿದ್ದಾರೆ. ಬಾಲಕಿಯನ್ನು ಬಾಗಲಕೋಟೆ ರೈಲ್ವೆ ಪೊಲೀಸರು ರಕ್ಷಿಸಿದ್ದಾರೆ. ರೈಲಿನಲ್ಲಿ ಗದಗ ಮೂಲದ 11ವಷ೯ದ ಅನು ಎಂಬ ಬಾಲಕಿಯನ್ನು ಗದಗದಿಂದ ಸೋಲ್ಹಾಪುರ ಕಡೆಗೆ ಕೊಂಡೊಯ್ಯುತ್ತಿದ್ದರು ದುಷ್ಕರ್ಮಿಗಳು. ಈ ವೇಳೆ ರಾತ್ರಿ 11.30ರ ಸಮಯದಲ್ಲಿ ಬಾಗಲಕೋಟೆ ರೈಲ್ವೆ ಪೋಲಿಸರು ದಿಢೀರ್ ಕಾಯಾ೯ಚರಣೆ ನಡೆಸಿ ಬಾಲಕಿಯನ್ನು ರಕ್ಷಿಸಿದ್ದಾರೆ. ಶಿವಪ್ಪ ಮತ್ತು ಶಾರದಾ ಎಂಬ ದಂಪತಿಯ ಪುತ್ರಿ ಅನು ಎಂದು ತಿಳಿದು ಬಂದಿದೆ. ಪೊಲೀಸರನ್ನು ನೋಡುತ್ತಿದ್ದಂತೆ ತಪ್ಪಿಸಿಕೊಂಡು ಓಡಿಹೋಗಿದ್ದಾರೆ ಕಿರಾತಕರು.


ಸಂಬಂಧಿತ ಟ್ಯಾಗ್ಗಳು

abduction Teen girl ಬಿಸ್ಕೆಟ್ ಅಪಹರಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ