ಮಾಜಿ ಸಚಿವ ಸೊಗಡು ಶಿವಣ್ಣ ಸ್ಪೋಟಕ ಹೇಳಿಕೆ

sogadu shivanna commented on drug mafia

14-08-2018

ಬೆಂಗಳೂರು: ರಾಮನಗರದಲ್ಲಿ ಬಂಧಿತನಾದ ಉಗ್ರನಿಗೂ ತುಮಕೂರಿಗೂ ನಂಟಿದೆ. ತುಮಕೂರಿನಲ್ಲೂ ಅವನ ಸಹಚರರಿದ್ದಾರೆ. ಸರ್ಕಾರ ಅದನ್ನ ಬಹಿರಂಗಪಡಿಸದೇ ಇರೋದು ದುರಾದೃಷ್ಟಕರ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಹೇಳಿದ್ದಾರೆ.

ಎರಡು ಬಾರಿ ವರ್ಷದ ಹಿಂದೆ ತುಮಕೂರಿನಲ್ಲಿ ಬಂಧಿತನಾಗಿದ್ದ ಸೈಯದ್ ಮುಜಾಹಿದ್ ಗೂ ರಾಮನಗರದ ಉಗ್ರನಿಗೂ ನಂಟಿತ್ತು. ತುಮಕೂರಿನಲ್ಲಿ ಹೊರರಾಜ್ಯದಿಂದ ಬಂದ ವ್ಯಕ್ತಿಗಳು ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾರೆ. ಅವರ ಮೇಲೆ ಪೊಲೀಸರು ನಿಗಾ ಇಡುತ್ತಿಲ್ಲ ಎಂದು ಶಿವಣ್ಣ ಆರೋಪಿಸಿದರು.

ಸರ್ಕಾರ ವೋಟ್ ಬ್ಯಾಂಕ್ ಗಾಗಿ ಉಗ್ರರಿರೋದನ್ನ ಬಹಿರಂಗಪಡಿಸುತ್ತಿಲ್ಲ, ಸರ್ಕಾರಕ್ಕೆ, ದೇಶ, ಸಮಾಜಕ್ಕಿಂತ ಅಧಿಕಾರ‌ ಮುಖ್ಯ ಎಂದು ದೂರಿದ್ದಾರೆ. ತುಮಕೂರಿನಲ್ಲಿ ಡ್ರಗ್ ಮಾಫಿಯಾ ಮಿತಿ ಮೀರಿದೆ. ಡ್ರಗ್ ಮಾಫಿಯಾದಿಂದ ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಪೊಲೀಸರು ದಂಧೆಕೋರರ ಜೊತೆ ಶಾಮೀಲಾಗಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಸೊಗಡು ಶಿವಣ್ಣ ಗಂಭೀರ ಅರೋಪ ಮಾಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

sogadu shivanna drug mafia ಸಮಾಜ ವೋಟ್ ಬ್ಯಾಂಕ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ