'ನನ್ನ ಸಾಲಮನ್ನಾ ಮಾಡಬೇಡಿ’ ಎಂದಿದ್ದಾರೆ ರೈತರೊಬ್ಬರು

An farmer requested government to do not loan waive his loan

13-08-2018

ಚಿಕ್ಕಮಗಳೂರು: ರೈತರ ಸಾಲಮನ್ನಾ ವಿಚಾರವಾಗಿ ರಾಜ್ಯದ ಹಲವೆಡೆ ಪ್ರತಿಭಟನೆಗಳು, ಭಾರೀ ಗದ್ದಲಗಳು ನಡೆದಿದ್ದವು. ಮತ್ತೊಂದೆಡೆ ರಾಜಕೀಯ ಮುಖಂಡರ ಕೆಸರೆರಚಾಟವೂ ನಡೆದಿತ್ತು. ಇನ್ನು ಒಂದು ಲಕ್ಷದ ವರೆಗಿನ ಸಾಲಮನ್ನಾ ಮಾಡಿ ಸರ್ಕಾರ ಬಜೆಟ್ ನಲ್ಲಿ ಘೋಷಿಸಿದೆ. ಆದರೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲಮನ್ನಾ ಮಾಡುವಂತೆ ಒತ್ತಡವೂ ಇದೆ. ಇದರ ಬೆನ್ನಲ್ಲೇ ಇದೆಲ್ಲದಕ್ಕೂ ತದ್ವಿರುದ್ಧವಾಗಿ ರೈತರೊಬ್ಬರು, ‘ತನ್ನ ಸಾಲಮನ್ನಾ ಬೇಡ ಎಂದು ಸರ್ಕಾರಕ್ಕೆ ರಕ್ಕೆ ಪತ್ರ ಬರೆದಿದ್ದಾರೆ. ಸಾಲಮನ್ನಾ ಮಾಡಿದರೆ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೆ ಎಂದಿದ್ದಾರಂತೆ ರೈತ.

ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕರಡಗೋಡು ಗ್ರಾಮದ ರೈತ ಅಮರನಾಥ ಈ ರೀತಿಯಾಗಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಮತ್ತು ಕೃಷಿ ಸಚಿವರಿಗೆ, ಜಿಲ್ಲಾಡಳಿತಕ್ಕೆ ಪತ್ರದ ಮೂಲಕ ‘ತಾನು ಮಾಡಿದ ಸಾಲಮನ್ನಾ ಮಾಡದಂತೆ ಒತ್ತಾಯಿಸಿದ್ದಾರೆ. ರಾಜ್ಯದಲ್ಲೇ ಸಾಲ ಮನ್ನಾ ಬೇಡಾ ಎಂದ ಮೊದಲ ರೈತ ಎಂಬ ಹೆಗ್ಗಳಿಕೆಗೆ ಅಮರನಾಥ ಪಾತ್ರರಾಗಿದ್ದಾರೆ.

‘ನನ್ನ ಆತ್ಮಸಾಕ್ಷಿ ನಿಮ್ಮ ಸಾಲ ಮನ್ನಾ ಒಪ್ಪುವುದಿಲ್ಲ’ ಹೀಗಾಗಿ ಸರ್ಕಾರ ಸಾಲಮನ್ನಾದಿಂದ ನನ್ನ ಹೆಸರು ಕೈ ಬಿಡುವಂತೆ ಮನವಿ ಮಾಡಿದ್ದಾರೆ. ಕರಗೋಡು ಗ್ರಾಮದಲ್ಲಿ 11ಎಕರೆ ಜಮೀನು ಹೊಂದಿದ್ದಾರಂತೆ ರೈತ ಅಮರನಾಥ. 2016ರಲ್ಲಿ ಕಾರ್ನಾಟಕ ಬ್ಯಾಂಕ್ ನಲ್ಲಿ ನಾಲ್ಕು ಲಕ್ಷ ಸಾಲಮಾಡಿದ್ದು, ಬಡ ರೈತರ ಸಾಲ ಮನ್ನಾ ಮಾಡಲು ಯಾವುದೇ ಅಭ್ಯಂತರವಿಲ್ಲ ಎಂದು ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

farmer Agriculture ಸಾಲಮನ್ನಾ ಬಜೆಟ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ