ಬ್ಲೂ ವೇಲ್ ಆಯ್ತು..ಇದೀಗ ಮತ್ತೊಂದು ಡೆಡ್ಲಿ ಗೇಮ್!

after blue whale game one more deadly challenge momo!

13-08-2018

ಬೆಂಗಳೂರು: ಡಡ್ಲಿ ಗೇಮ್ ಎಂತಲೇ ಕುಖ್ಯಾತಿ ಪಡೆದಿದ್ದ ಬ್ಲೂವೇಲ್ ಗೇಮ್ ನಂತರ, ಇದೀಗ ವಾಟ್ಸಾಪ್ ಮೂಲಕ ಮೋಮೋ ಚಾಲೆಂಜ್ ಎಂಬ ಮತ್ತೊಂದು ಆತ್ಮಹತ್ಯಾ ಚಾಲೆಂಜ್ ಬಗ್ಗೆ ಕೇಳಿಬರುತ್ತಿದೆ. ಈ ಚಾಲೆಂಜ್ ನಲ್ಲಿ ಮೊದಲು ಅಪರಿಚಿತ ನಂಬರಿನಿಂದ ವಾಟ್ಸ್ ಆಪ್ ಮೂಲಕ ಒಂದು ಸಂದೇಶವನ್ನು ಬರುತ್ತದೆ. ಬಳಿಕ ಆ ಚಾಲೆಂಜ್ ಒಪ್ಪಿಕೊಂಡರೆ ಹಾಯ್-ಹಲೋ ಎಂದು ಸಂದೇಶ ಕಳುಹಿಸಬೇಕಾಗುತ್ತದೆ. ನಂತರ ಒಂದು ಅಪರಿಚಿತ ನಂಬರ್ ಕೊಟ್ಟು ಮಾತನಾಡುವಂತೆ ಚಾಲೆಂಜ್ ನೀಡುತ್ತದೆ. ಬಳಕೆದಾರರಿಗೆ ಕೆಲವು ಕೆಲಸಗಳನ್ನು ಕೊಡಲಾಗುತ್ತದೆ. ಒಂದು ವೇಳೆ ಆ ಕೆಲಸವನ್ನು ಅವರು ಪೂರ್ಣ ಮಾಡದಿದ್ದರೆ, ಬಳಕೆದಾರಿಗೆ ಬೆದರಿಕೆ ಒಡ್ಡುತ್ತದೆ. ಕೊನೆಯದಾಗಿ ಬೆದರಿಕೆ ಮತ್ತು ಭಯದಿಂದ ಬಳಕೆದಾರರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದನೆ ನೀಡುತ್ತದೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ಪೊಲೀಸರು ಪೋಷಕರಿಗೆ 'ಮೋಮೋ' ಚಾಲೆಂಜ್ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಸೈಬರ್ ಕ್ರೈಮ್ ಅಧಿಕಾರಿಗಳು ಈ ಆನ್ಲೈನ್ ಸವಾಲುಗಳಿಂದ ತಮ್ಮ ಮಕ್ಕಳನ್ನು ರಕ್ಷಿಸಲು ಪೋಷಕರಿಗೆ ಸಲಹೆಗಳನ್ನು ನೀಡುತ್ತಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Blue whale momo challenge ಡಡ್ಲಿ ಗೇಮ್ ಚಾಲೆಂಜ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ