ಕೋರ್ಟ್ ಬಳಿಯೇ ಕಿಕಿ ಡ್ಯಾನ್ಸ್: ಯುವತಿಗಾಗಿ ಪೊಲೀಸರ ಶೋಧ

Kiki dance in front of high court: police searching for that girl

13-08-2018

ಬೆಂಗಳೂರು: ನಗರದ ಹೈಕೋರ್ಟ್ ಬಳಿಯೇ ಕಿಕಿ ಡ್ಯಾನ್ಸ್ ಮಾಡಿರುವ ಯುವತಿಗಾಗಿ ನಗರ ಪೊಲೀಸರು ಶೋಧ ನಡೆಸಿದ್ದಾರೆ. ದಿನದಿಂದಕ್ಕೆ ಹೆಚ್ಚಾಗುತ್ತಿದ್ದ ಅಪಾಯಕಾರಿ ಕಿಕಿ ಡ್ಯಾನ್ಸ್ ಚಾಲೆಂಜ್‍ನ್ನು ತಡೆಗೆ ನಗರ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿರುವ ಬೆನ್ನಲ್ಲೇ ಹೈಕೋರ್ಟ್ ಹಿಂಭಾಗದಲ್ಲಿ ಯುವತಿ ಡ್ಯಾನ್ಸ್ ಮಾಡಿದ್ದಾಳೆ.

ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದೆ. ಭಾನುವಾರ ರಜೆ ಇದ್ದ ಕಾರಣ ಯುವತಿ ಸಂಜೆ ಕಬ್ಬನ್ ಪಾರ್ಕ್ ಬಳಿ ಇರುವ ಹೈಕೋರ್ಟ್ ಬಳಿ ಕಾರಿನಲ್ಲಿ ಹೋಗಿದ್ದಾಳೆ. ಬಳಿಕ ಯಾರು ಇಲ್ಲದ ವೇಳೆ ಕಾರಿನಿಂದ ಇಳಿದು ಡ್ಯಾನ್ಸ್ ಮಾಡುತ್ತಾ ಹೋಗಿದ್ದಾಳೆ. ಅಲ್ಲದೇ ಡ್ಯಾನ್ಸ್ ಮಾಡುತ್ತಲೇ ಯುವತಿ ಕಾರ್ ಹತ್ತಿದ್ದಾಳೆ. ಈ ಎಲ್ಲ ದೃಶ್ಯವನ್ನು ಸ್ಥಳದಲ್ಲಿದ್ದವರು ತಮ್ಮ ಮೊಬೈಲಿನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ವಿಡಿಯೋ ಗಮನಸಿರುವ ನಗರ ಪೊಲೀಸರು ಅದನ್ನು ಪರಿಶೀಲಿಸಿ ಯುವತಿಯ ಮೇಲೆ ಕ್ರಮಕ್ಕೆ ಮುಂದಾಗಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ