ಸೋಮನಾಥ ಚಟರ್ಜಿ ನಿಧನಕ್ಕೆ ದೇವೇಗೌಡರ ಸಂತಾಪ

Deve Gowda

13-08-2018

ಬೆಂಗಳೂರು: ಮಾಜಿ ಲೋಕಸಭಾಧ್ಯಕ್ಷ್ಯ ಹಾಗೂ ಸಿಪಿಐ(ಎಂ)ನ ಹಿರಿಯ ನಾಯಕರಾದ ‘ಸೋಮನಾಥ ಚಟರ್ಜಿ ಅವರ ನಿಧನ ಮನಸ್ಸಿಗೆ ಬಹಳ ನೋವು ತಂದಿದೆ’ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹೇಳಿದ್ದಾರೆ. ಅವರು ಲೋಕಾಸಭಾಧ್ಯಕ್ಷರಾಗಿ  ಕಾರ್ಯ ನಿರ್ವಹಿಸ್ಸಿದ್ದರು, ಚಟರ್ಜಿ ಅವರು ಅಜಾತಶತ್ರುವಾಗಿದ್ದರು. 1996ರಲ್ಲಿ ಅವರಿಗೆ ಉತ್ತಮ ಸಂಸದೀಯ ಪಟು ಪ್ರಶಸ್ತಿ ಕೂಡ ಲಭಿಸಿತ್ತು ಎಂದು ದೇವೇಗೌಡರು ಸ್ಮರಿಸಿದ್ದಾರೆ. ಭಗವಂತ ಮೃತರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಆ ದೇವರು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ತುಂಬಲಿ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಕಂಬನಿ ಮಿಡಿದಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ