ರಾಜ ಭವನ ನೋಡಲು ಸುವರ್ಣಾವಕಾಶ

Are You willing to see raj bhavan, here is a opportunity!

13-08-2018

ಬೆಂಗಳೂರು: ರಾಜ್ಯದ ರಾಜ್ಯಪಾಲರ ಅಧಿಕೃತ ನಿವಾಸ ರಾಜ ಭವನವನ್ನು ವೀಕ್ಷಿಸಲು ಇಲ್ಲಿದೆ ಸುವರ್ಣಾವಕಾಶ. ಹೌದು ಈ ಭಾರಿಯ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಜ್ಯಪಾಲರು ಸಾರ್ವಜನಿಕರಿಗೆ ವಿನೂತನ ಗಿಫ್ಟ್ ನೀಡಿದ್ದಾರೆ. ರಾಜ್ಯಭವನದ ಒಳಾಂಗಣ ನೋಡಲು ಬಯಸುವವರಿಗೆ ಇದೇ ತಿಂಗಳ 16 ರಿಂದ 31 ರವರೆಗೆ ಅವಕಾಶ ನೀಡಲಾಗಿದೆ. ಪ್ರತಿ ದಿನ ಸಂಜೆ 4 ರಿಂದ 6.30ರ ವರೆಗೆ ರಾಜಭವನಕ್ಕೆ ಸಾರ್ವಜನಿಕರು ಎಂಟ್ರಿ ಕೊಡಬಹುದಾಗಿದೆ. ಆದರೆ, ಅದಕ್ಕೂ ಮೊದಲು, ರಾಜಭವನ ಪ್ರವೇಶಿಸಲು ವೆಬ್‌ ಸೈಟ್‌ ನಲ್ಲಿ ನೋಂದಣಿ ಮಾಡಬೇಕಾಗಿದೆ. http://rajbhavan.kar.nic.in ವೆಬ್ ಸೈಟ್ ನಲ್ಲಿ ತಮ್ಮ ಹೆಸರು ಮತ್ತು ವಿಳಾಸ ಇತರೆ ಮಾಹಿತಿಯನ್ನು ಐದು ದಿನಗಳ ಮೊದಲೇ ನೋಂದಣಿ ಮಾಡುವುದು ಕಡ್ಡಾಯ. ನೋಂದಣಿ ಬಳಿಕ ಇ-ಮೇಲ್‌ ಅಥವಾ ಎಸ್‌ಎಂಎಸ್‌ ಮೂಲಕ ಪ್ರವೇಶಕ್ಕೆ ಅನುಮತಿ ದೊರೆಯಲಿದ್ದು, ಎಸ್‌ಎಂಎಸ್‌ ಅಥವ ಇ-ಮೇಲ್‌ ಗೆ ಬಂದಿರುವ ಪ್ರವೇಶ ಪತ್ರದ ಪ್ರತಿ, ಭಾರತೀಯರು ಗುರುತಿನ ಚೀಟಿ, ವಿದೇಶಿಯರು ಪಾಸ್‌ ಪೋರ್ಟ್‌ ತೋರಿಸಬೇಕಾಗುತ್ತದೆ. 20 ರಿಂದ 30ನಿಮಿಷಗಳ ಅವಧಿಯಲ್ಲಿ ರಾಜಭವನ ನೋಡಬಹುದಾಗಿದೆ ಇದಕ್ಕೆ ಯಾವುದೇ ಶುಲ್ಕ ಇಲ್ಲ.


ಸಂಬಂಧಿತ ಟ್ಯಾಗ್ಗಳು

Raj Bhavan Governor Residence ಮಾಹಿತಿ ಗುರುತಿನ ಚೀಟಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ