ಕಾಬೂಲ್ ನಲ್ಲಿ ಭಾರಿ ಸ್ಪೋಟ !

Kannada News

31-05-2017

ನವದೆಹಲಿ:- ಅಫಘಾನಿಸ್ತಾನದ ರಾಜಧಾನಿ ಕಾಬೂಲ್ ನಲ್ಲಿ ಭಾರಿ ಸ್ಪೋಟ ಸಂಭವಿಸಿದೆ. ಭಾರತೀಯ ರಾಯಭಾರಿ ಕಛೇರಿ ಬಳಿ, ಕಾರು ಬಾಂಬ್ ಸ್ಪೋಟಿಸಿದೆ. ಸ್ಪೋಟದಲ್ಲಿ 40 ಜನರು ಸಾವನ್ನಪ್ಪಿದ್ದು  200 ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.  ಭಾರತೀಯ ರಾಯಭಾರಿಗಳು ಸೇರಿದಂತೆ ಇತರ ಭಾರತೀಯರು ಸುರಕ್ಷಿತರಾಗಿದ್ದಾರೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್  ತಿಳಿಸಿದ್ದಾರೆ.  ಭಾರತೀಯ ರಾಯಭಾರಿ ಕಛೇರಿಯಿಂದ ಕೇವಲ 50 ಮೀಟರ್  ಅಂತರದಲ್ಲಿ ಸ್ಟೋಟ ಸಂಭವಿಸಿದ್ದು, ಸುತ್ತಮುತ್ತಲಿನ ಪ್ರದೇಶ ಹೊಗೆಯಿಂದ ಆವರಿಸಿದೆ. ಸ್ಪೋಟಕ್ಕೆ ನಿಖರವಾದ ಮಾಹಿತಿ ತಿಳಿದು ಬಂದಿಲ್ಲ, ರಕ್ಷಣಾ ಕಾರ್ಯವು ಮುಂದುವರಿದಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ ಎಂಬ ಶಂಕೆ ವ್ಯಕ್ತ ಪಡಿಸಿದ್ದಾರೆ. 


 


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ