ಲೋಕಸಭಾ ಚುನಾವಣೆಗೆ ಇದು ದಿಕ್ಸೂಚಿ: ಎಂ.ಬಿ.ಪಾಟಿಲ

Ex-minister m.b patil reaction on rahul visit to bidar

11-08-2018

ಬೆಂಗಳೂರು: ‘ಲೋಕಸಭಾ ಚುನಾವಣೆಗೆ ಇದೊಂದು ದಿಕ್ಸೂಚಿ, ಎಂದು ಬೀದರ್ ಜಿಲ್ಲೆಗೆ ರಾಹುಲ್ ಗಾಂಧಿ ಆಗಮನದ ಕುರಿತು ಮಾಜಿ ಸಚಿವ ಎಂ.ಬಿ.ಪಾಟಿಲ ಹೇಳಿದ್ದಾರೆ. ಬೆಂಗಳೂರಿನ ಸದಾಶಿವನಗರದಲ್ಲಿನ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪಾಟೀಲ, 'ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಮ್ಮ‌ ಮುಖಂಡರನ್ನ‌, ಕಾರ್ಯಕರ್ತರನ್ನು ಹುರಿದುಂಬಿಸಲು ಬರುತ್ತಿದ್ದಾರೆ. ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗಾಗಿ 371(ಜೆ) ಮೂಲಕ ವಿಶೇಷ ಸವಲತ್ತುಗಳನ್ನು ಜಾರಿಗೆ ತಂದವರು ನಾವೇ, ಹೀಗಾಗಿ ಅಭಿವೃದ್ಧಿ ವಿಚಾರದಲ್ಲಿ ಈಗ ಸಮಸ್ಯೆಯಾಗುತ್ತಿಲ್ಲ. ಅವರು ಡ್ಯಾಮೇಜ್ ಕಂಟ್ರೋಲ್ಗೇನು ಬರುತ್ತಿಲ್ಲ, ಅಷ್ಟಕ್ಕೂ ಪಕ್ಷಕ್ಕೆ ಡ್ಯಾಮೇಜು ಆಗಿಲ್ಲ' ಎಂದಿದ್ದಾರೆ.

ಇನ್ನು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ವತಂತ್ರವಾಗಿ ಸ್ಪರ್ಧೆ ಮಾಡಲಿದೆ ಎಂದರು. ಆದರೆ ಸ್ಥಳೀಯ ನಾಯಕರು ಹೊಂದಾಣಿಕೆ ಮಾಡಿಕೊಳ್ಳಬಹುದು. ರಾಜಧರ್ಮ ಪಾಲಿಸುವುದಾಗಿ ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಾರೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಅನಿವಾರ್ಯವಾಗಿ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ. ನಮ್ಮ ಶಾಸಕರು ಇರುವ ಕಡೆ ಹಾಗೂ ನಾವು ಸೋತಿರುವ ಕಡೆ ಸ್ಥಳೀಯ ನಾಯಕರೇ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

M.B.Patil election ದೇವೇಗೌಡರು ಹೊಂದಾಣಿಕೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ