ಸುಖಾ ಸುಮ್ಮನೆ‌ ಆರೋಪ ಮಾಡಬೇಡಿ: ಈಶ್ವರಪ್ಪಗೆ ಸಿಎಂ ತಿರುಗೇಟು!

CM kumaraswamy reaction to k.s.eshwarappa allegation!

11-08-2018

ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ‌ ಮಠಕ್ಕೆ ಸಿಎಂ ಕುಮಾರಸ್ವಾಮಿ ಭೇಟಿ ನೀಡಿದ್ದಾರೆ. ಈ ವೇಳೆ ವಿಶೇಷ ಪೂಜೆ ಸಲ್ಲಿಸಿದ ಕುಮಾರಸ್ವಾಮಿ ದಂಪತಿಗಳು, ಸುತ್ತೂರು ದೇಶಿ ಕೇಂದ್ರ ಸ್ವಾಮೀಜಿಗಳ ಆಶಿರ್ವಾದ ಪಡೆದರು. ‌ಸಿಎಂ ಕುಮಾರಸ್ವಾಮಿ ಅವರಿಗೆ‌ ಪೂರ್ಣ ಕುಂಭ ಸ್ವಾಗತ ಕೋರಿತ್ತು ಸುತ್ತೂರು ಮಠ. ಸ್ಥಳಕ್ಕಾಗಮಿಸಿದ್ದ ನೂರಾರು ಕಾರ್ಯಕರ್ತರು ಸಿಎಂ ಅವರನ್ನು ನೋಡಲು ಮುಗಿ ಬೀಳುತ್ತಿದ್ದರು. ಸಿಎಂಗೆ ಸಚಿವರಾದ ಸಾ.ರಾ.ಮಹೇಶ್, ಜಿ.ಟಿ.ದೇವೇಗೌಡ, ಸಿ.ಎಸ್.ಪುಟ್ಟರಾಜು, ಎನ್.ಮಹೇಶ್. ಜೆ.ಡಿ.ಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಸಾಥ್ ನೀಡಿದ್ದರು.

ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು ‘ಬಿಜೆಪಿಯವರು 5 ವರ್ಷ ಅಧಿಕಾರದಲ್ಲಿದ್ದಾಗ ವರ್ಗಾವಣೆ ಮಾಡಲಿಲ್ವಾ? ವರ್ಗಾವಣೆ ಮಾಡುವಾಗ ಅವರೂ ದಂಧೆ ಮಾಡಿದ್ರಾ? ಎಂದು ಬಿಜೆಪಿಯವರನ್ನು ಪ್ರಶ್ನೆ‌ಮಾಡಿದ್ದಾರೆ. ವರ್ಗಾವಣೆ ಅಡಳಿತದ ಒಂದು ಭಾಗ. ಅದರಲ್ಲಿ ದಂಧೆ ಎಲ್ಲಿಂದ ಬಂತು. ದಂಧೆ ಬಗ್ಗೆ ಒಂದು‌ ದಾಖಲೆ‌ ಇದ್ದರೆ ಕೊಡಿ. ಸುಖಾ ಸುಮ್ಮನೆ‌ ಆರೋಪ ಮಾಡಬೇಡಿ ಎಂದು ಹೆಸರು ಹೇಳದೆಯೇ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪಗೆ ತಿರುಗೇಟು ನೀಡಿದ್ದಾರೆ.

ಇನ್ನು ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಚಾರದ ಕುರಿತು, ಕಾಂಗ್ರೆಸ್ ಮತ್ತು ನಮ್ಮ ನಡುವೆ ಫ್ರೆಂಡ್ಲಿ ಫೈಟ್ ನಡೆಯಲಿದೆ. ಈ ಬಗ್ಗೆ ಸ್ಥಳೀಯ ಮಟ್ಟದ ನಾಯಕರೇ ಮಾತನಾಡಿದ್ದಾರೆ, ಎನ್ನುವ ಮೂಲಕ ಸ್ಥಳೀಯ ಸಂಸ್ಥೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ‌ ಇಲ್ಲ  ಎಂಬುದನ್ನು ಸಿಎಂ ಸ್ಪಷ್ಟಪಡಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ