ಜೆಡಿಎಸ್ ಪಕ್ಷದ ಕಾರ್ಯಕ್ರಮ ರದ್ದು !

Kannada News

31-05-2017

ಹುಬ್ಬಳ್ಳಿ:- ಹುಬ್ಬಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪಾರ್ವತಮ್ಮ ರಾಜಕುಮಾರ್ ನಿಧನಕ್ಕೆ ಕಂಬನಿ ಮಿಡಿದರು. ಕನ್ನಡ‌ ಚಿತ್ರರಂಗಕ್ಕೆ ಪಾರ್ವತಮ್ಮ ಅವರ ಕೊಡುಗೆ ಅಪಾರ. ಪಾರ್ವತಮ್ಮ ಅಗಲಿಕೆ ನೋವು ತಂದಿದೆ. ನಾಡಿನ ಜನತೆಗೆ ಮತ್ತು ಚಿತ್ರರಂಗಕ್ಕೆ ಬಹಳ ಆಘಾತವಾಗಿದೆ. ಚಿತ್ರರಂಗಕ್ಕೆ ಬಹಳ ಕೊಡುಗೆಯನ್ನು ಕೊಟ್ಟಿದ್ದಾರೆ. ಪಾರ್ವತಮ್ಮ ಮಾತೃ ಸಮಾನರಾಗಿ ಕೆಲಸ ಮಾಡಿದ ಆದರ್ಶ ಮಹಿಳೆ. ಡಾ‌.ರಾಜಕುಮಾರ ಅವರ ಯಶಸ್ಸಿನ  ಹಿಂದೆ ಪಾರ್ವತಮ್ಮ ಅವರ ಕೊಡುಗೆ ಅಪಾರ. ಹಲವಾರು ಕಲಾವಿದರನ್ನು ಚಿತ್ರರಂಗಕ್ಕೆ ಕೊಡುಗೆ ಕೊಟ್ಟಿದ್ದಾರೆ, ಆ ತಾಯಿಯ ಆತ್ಮಕ್ಕೆ ಭಗವಂತ ಶಾಂತಿ ಕರುಣಿಸಲಿ. ಪಾರ್ವತಮ್ಮ ಅವರ ಸಾವಿನ ಹಿನ್ನೆಲೆ ಜೆಡಿಎಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮ ರದ್ದುಮಾಡಿದ್ದೇವೆ. ಹಾವೇರಿ ಕಾರ್ಯಕ್ರಮ ರದ್ದು ಮಾಡಲಾಗಿದೆ. ಅವರ ಅಂತಿಮ ದರ್ಶನದಲ್ಲಿ ಭಾಗಿಯಾಗಲು ಬೆಂಗಳೂರಿಗೆ ತೆರಳುತ್ತಿವೆ ಎಂದರು.⁠⁠⁠⁠
 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ