ಬಸ್- ಬೈಕ್ ಮುಖಾ ಮುಖಿ ಡಿಕ್ಕಿ: ಇಬ್ಬರ ದುರ್ಮರಣ

Bus-Bike Accident0: two death

11-08-2018

ಬೀದರ್: ಮಹಾರಾಷ್ಟ್ರ ಸಾರಿಗೆ ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಇಬ್ಬರು ಸಾವನಪ್ಪಿರುವ ಘಟನೆ ಜಿಲ್ಲೆಯ ಔರಾದ್ ತಾಲ್ಲೂಕಿನ ಏಕಂಬಾ ಗ್ರಾಮದ ಬಳಿ ನಡೆದಿದೆ. ಬೊಂತಿತಾಂಡ ನಿವಾಸಿಗಳಾದ ರಾಜು ಲಕ್ಷ್ಮಣ(25) ಮತ್ತು ಮಾರುತಿ ನಾರಾಯಣ (37)ಮೃತ ದುರ್ದೈವಿಗಳು. ಮಹಾರಾಷ್ಟ್ರ ಸಾರಿಗೆ ಸಂಸ್ಥೆಯ ಬಸ್ ಔರಾದ್ ಕಡೆಯಿಂದ ವೇಗವಾಗಿ ಬರುತ್ತಿದ್ದು, ತುಂತುರು ಮಳೆಯ ನಡುವೆ ಬೈಕ್ ನಲ್ಲಿ ಈ ಇಬ್ಬರೂ ಮನೆಗೆ ತೆರಳುತ್ತಿದ್ದ ಈ ವೇಳೆ ಅಪಘಾತ ನಡೆದಿದೆ. ಅಪಘಾತದಲ್ಲಿ ರಾಜು ಎಂಬಾತ ಸ್ಥಳದಲ್ಲೇ ಸಾವನಪ್ಪಿದ್ದು, ಗಂಭೀರವಾಗಿ ಗಾಯಗೊಂಡ ಮಾರುತಿ ಎಂಬಾತನನ್ನು ಜಿಲ್ಲಾಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ  ಕೊನೆಯುಸಿರೆಳೆದಿದ್ದಾರೆ.  ಘಟನಾ ಸ್ಥಳಕ್ಕೆ ಸಿಪಿಐ ರಮೇಶಕುಮಾರ್ ಮೈಲೂರಕರ, ಪಿಎಸ್ಐ ನಾನಾಗೌಡ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಔರಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

bus accident Bike ಅಪಘಾತ ಜಿಲ್ಲಾಸ್ಪತ್ರೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ