ತುಮಕೂರಲ್ಲಿ ‘ಸ್ವರ್ಣ ಗೃಹ’ ಯೋಜನೆ ಜಾರಿಗೆ11-08-2018

ಬೆಂಗಳೂರು: ಶ್ರಮಿಕರು ಮತ್ತು ಬಡವರ ಮನೆಯ ಕನಸನ್ನು ನನಸು ಮಾಡಲು ತುಮಕೂರಿನಲ್ಲಿ ಖಾಸಗಿ-ಸಾರ್ವಜನಿಕ ಸಹಭಾಗಿತ್ವದಡಿ “ ಸ್ವರ್ಣ ಗೃಹ “ ಯೋಜನೆ ಜಾರಿಗೆ ತರಲಾಗಿದೆ. ಫೆಲಿಸಿಟಿ ಅಡೋಬ್ ಸಂಸ್ಥೆಯ ಸಹಯೋಗದಡಿ ಬಹುಮಹಡಿ ವಸತಿ ಸಂಕಿರ್ಣಗಳನ್ನು  ನಿರ್ಮಿಸುತ್ತಿದ್ದು, ಇದಕ್ಕೆ ಸಾರ್ವಜನಿಕ ಬ್ಯಾಂಕ್‍ಗಳಿಂದ ಸೂಕ್ತ ಸಾಲ ಸೌಲಭ್ಯದ ವ್ಯವಸ್ಥೆ ಮಾಡಲಾಗಿದೆ.

ತುಮಕೂರಿನ ಅನ್ನೇನಹಳ್ಳಿಯಲ್ಲಿ ಇಡಬ್ಲ್ಯುಎಸ್ ಮತ್ತು ಎಲ್.ಐ.ಜಿ ವರ್ಗಕ್ಕೆಂದು ಕೈಗೆಟುಕುವ ದರದ,  ಆಧುನಿಕ ಜೀವನಶೈಲಿಯ ಅವಶ್ಯಕತೆಗಳನ್ನು ಪೂರೈಸುವ ಮನೆಗಳನ್ನು ನಿರ್ಮಿಸುತ್ತಿದೆ. ಈ ಯೋಜನೆಯಡಿ ಯಾವುದೇ ಪೂರ್ವ ಪಾವತಿಯ ಕಂತುಗಳನ್ನು ಪಾವತಿಸುವ ಅಗತ್ಯವಿಲ್ಲ. ಮನೆ ಪ್ರವೇಶ ಮಾಡುವ ಮೊದಲು ಕೇವಲ ಶೇ.10ರಷ್ಟು ಹಣ ನೀಡಿದರೆ ಸಾಕು, ಉಳಿದ ಶೇ 90 ರಷ್ಟು ಹಣವನ್ನು ಸಾಲದ ರೂಪದಲ್ಲಿ ಪಡೆದುಕೊಳ್ಳಬಹುದು. ಸಾಲದ ಜತೆ ಸಬ್ಡಿಡಿಯೂ ಸಹ ದೊರೆಯುವುದರಿಂದ ಸ್ವಂತ ಸೂರು ಹೊಂದುವ ಕನಸು ನನಸು ಮಾಡಲು ಈ ಯೋಜನೆ ಸಹಕಾರಿಯಾಗಿದ್ದು, ಮಾಸಿಕ ಕನಿಷ್ಠ ಕಂತು ಕನಿಷ್ಠ 2,500 ರೂ ನಿಂದ ಆರಂಭವಾಗಲಿದೆ.

ಸ್ವರ್ಣ ಗೃಹ ಯೋಜನೆಗೆ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ ಅಂಗೀಕಾರ ದೊರೆತಿದ್ದು, ಒಟ್ಟು 1.38 ಎಕರೆ ಭೂಮಿಯಲ್ಲಿ 268 ಮನೆಗಳನ್ನು ನಿರ್ಮಿಸಲಾಗುತ್ತಿದೆ. ನಾಲ್ಕು ಮಹಡಿಯ 1 ಬಿಎಚ್‍ಕೆಯ ಮನೆಗಳಿವೆ. ಇದು ಗ್ರಾಹಕರಿಗೆ ಕಾರು ತಂಗುದಾಣ, ಮಕ್ಕಳ ಆಟದ ಪ್ರದೇಶ ಮತ್ತು ಪ್ರತಿ ಎರಡು ಬ್ಲಾಕ್ ಗಳಿಗೆ ಒಂದರಂತೆ ಪ್ರಯಾಣಿಕರ ತಂಗುದಾಣ ಸೇರಿದಂತೆ ಅತ್ಯುತ್ತಮ ಸೌಕರ್ಯ ಮತ್ತು ಉತ್ತಮ ವಿನ್ಯಾಸಗೊಳಿಸಿದ ಮನೆಗಳನ್ನು ಒಳಗೊಂಡಿದೆ.

ಆಧುನಿಕ ತಂತ್ರಜ್ಞಾನದಡಿ ಮನೆಗಳನ್ನು ನಿರ್ಮಿಸುತ್ತಿದ್ದು, ದಿನವೊಂದಕ್ಕೆ ಎರಡು ಮನೆಗಳನ್ನು ನಿರ್ಮಿಸುವ ಸಾಮರ್ಥ್ಯ ಹೊಂದಲಾಗಿದೆ. ಸಾಂಪ್ರದಾಯಿಕ ನಿರ್ಮಾಣ ವಿಧಾನಗಳಿಂದ ಶೇ.50ರಷ್ಟು ಕಡಿಮೆ ಅವಧಿಯಲ್ಲಿ ಮನೆಗಳನ್ನು ನಿರ್ಮಿಸಬಹುದಾಗಿದೆ. ಎರಡನೇ ಹಂತದಲ್ಲಿ ತುಮಕೂರಿನ ವಸಂತನರಸೀಪುರದ ಕೈಗಾರಿಕಾ ಪ್ರದೇಶ ಸಮೀಪ ವಸತಿ ಸಂಕಿರ್ಣ ನಿರ್ಮಿಸಲು ಕಾರ್ಯಯೋಜನೆ ರೂಪಿಸಲಾಗಿದೆ.


ಸಂಬಂಧಿತ ಟ್ಯಾಗ್ಗಳು

PPT swarna griha ವಿನ್ಯಾಸ ತಂತ್ರಜ್ಞಾನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ