ಕಾಮುಕ ಬಡ್ಡಿ ದಂಧೆಕೋರನಿಗೆ ಹಿಗ್ಗಾ-ಮುಗ್ಗಾ ಥಳಿತ

a group of people assaulted a man for his illegal activities

10-08-2018 253

ಬೆಂಗಳೂರು: ಬಡ್ಡಿ ಹಣ ಕೊಡದಿದ್ದರೆ ಮಹಿಳೆಯರನ್ನು ಮಂಚಕ್ಕೆ ಕರೆಯುತ್ತಿದ್ದ ಸಚಿವ ಜಮೀರ್ ಅಹಮದ್ ಬೆಂಬಲಿಗನನ್ನು ಸಾರ್ವಜನಿಕರು ಹಿಡಿದು ಧರ್ಮದೇಟು ನೀಡಿ ತಿಲಕ್‍ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ಚಾಮರಾಜಪೇಟೆಯ ಟಿಪ್ಪು ನಗರದ ಹಿದಾಯತ್ ಖಾನ್‍ನನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಬಡ್ಡಿ ವ್ಯವಹಾರ ಮಾಡಿಕೊಂಡಿದ್ದ ಖಾನ್, ಹಣ ಪಡೆದವರು ಹಿಂದಿರುಗಿಸಿಲ್ಲದಿದ್ದರೆ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ತಿಳಿದ ಸಾರ್ವಜನಿಕರೇ ಹಿಗ್ಗಾ-ಮುಗ್ಗಾ ಥಳಿಸಿದ್ದಾರೆ.

ಈ ಬಗ್ಗೆ ನೊಂದ ಮಹಿಳೆಯೊಬ್ಬರು ತನ್ನ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದು, `ಹಿದಾಯತ್ ತುಂಬಾ ಕೆಟ್ಟ ಮನುಷ್ಯ ಹೆಣ್ಮಕ್ಕಳ ಅಸಹಾಯಕತೆಯನ್ನು ಬಳಸಿಕೊಳುತ್ತಿದ್ದಾನೆ. ಬಡ್ಡಿಗೆ ಹಣ ನೀಡಿ ಅವರ ಜೊತೆ ಸಂಬಂಧ ಬೆಳೆಸಿ ಬ್ಲಾಕ್ ಮೇಲ್ ಮಾಡುತ್ತಾನೆ. ಇವನು ತುಂಬಾ ಚಿಕ್ಕ ಹುಡುಗಿಯರು ಮತ್ತು ಮಹಿಳೆಯರ ಜೀವನ ಹಾಳು ಮಾಡಿದ್ದಾನೆ. ಹೆಣ್ಣು ಮಕ್ಕಳ ಬಾಳಲ್ಲಿ ಆಟವಾಡುತ್ತಿದ್ದಾನೆ. ಇವನಿಗೆ ಶಿಕ್ಷೆಯಾಗಬೇಕು. ಜಮೀರ್ ಸಾಬ್ ನಮಗೆ ನ್ಯಾಯ ಕೊಡಿಸಿ' ಅಂತ ಸಚಿವರ ಬಳಿ ಮನವಿ ಮಾಡಿಕೊಂಡಿದ್ದಾರೆ.

ಹಿದಾಯತ್ ಖಾನ್ ಈತ ಸಚಿವ ಜಮೀರ್ ಅಹಮದ್ ಖಾನ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದಾನೆ. ಹಣದ ಅವಶ್ಯಕತೆ ಇರುವವರಿಗೆ ಸುಮಾರು 30% ಗೆ ಬಡ್ಡಿಗೆ ಹಣ ಕೊಡುತ್ತಿದ್ದನು. ಬಳಿಕ ಬಡ್ಡಿ ಕೇಳುತ್ತಿದ್ದನು. ಒಂದು ವೇಳೆ ಬಡ್ಡಿ ಹಣ ಹಿಂತಿರುಗಿಸದೇ ಇದ್ದರೆ ಹೆಣ್ಮಕ್ಕಳನ್ನ ಮಂಚಕ್ಕೆ ಕರೆಯುತ್ತಿದ್ದನು. ಹೆಣ್ಮಕ್ಕಳ ಅಸಹಾಯಕತೆಯನ್ನು ದುರುಪಯೋಗ ಮಾಡಿಕೊಂಡು ಲೈಂಗಿಕವಾಗಿ ಬಳಸಿಕೊಂಡು ನಂತರ ಅವರನ್ನೇ ಬ್ಲಾಕ್ ಮೇಲ್ ಮಾಡುತ್ತಿದ್ದನು ಎಂದು ನೊಂದ ಮಹಿಳೆ ಹೇಳಿದ್ದಾರೆ.

ಇದೇ ವಿಚಾರವಾಗಿ ಸಾರ್ವಜನಿಕರು ತಿಲಕ್ ನಗರದ ಮನೆಯಲ್ಲಿದ್ದ ಹಿದಾಯತ್ ಹೋಗಿ ಥಳಿಸಿದ್ದಾರೆ. ಬಳಿಕ ಸಾರ್ವಜನಿಕರು ಹಿದಾಯತ್ ಖಾನ್ ನನ್ನ ತಿಲಕ್ ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ