ಖಳನಟ ಧರ್ಮನ ಬಂಧನಕ್ಕೆ ಪೊಲೀಸರ ತೀವ್ರ ಶೋಧ

police searching for kannada actor dharma to arrest!

10-08-2018

ಬೆಂಗಳೂರು: ಸಿನೆಮಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿ 15 ಲಕ್ಷ ಸುಲಿಗೆ ಮಾಡಿ ವಂಚಿಸಿ ಪರಾರಿಯಾಗಿರುವ ಸ್ಯಾಂಡಲ್‍ವುಡ್‍ ನ ಖಳನಟ ಧರ್ಮನ ಬಂಧನಕ್ಕೆ ಬೇಗೂರು ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.

ದೂರು ದಾಖಲಾದ ನಂತರ ಧರ್ಮ ತಲೆ ಮರೆಸಿಕೊಂಡಿದ್ದು ಕಳೆದ ಒಂದು ತಿಂಗಳಿನಿಂದ ಕಾರ್ಯಾಚರಣೆ ನಡೆಸಿದರೂ ಆತ ಪತ್ತೆಯಾಗಿಲ್ಲ, ವಿಶೇಷ ತಂಡ ರಚಿಸಿ ಆತನನ್ನು ಅದಷ್ಟು ಶೀಘ್ರ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ತಂಪು ಪಾನೀಯದಲ್ಲಿ ಮತ್ತು ಬರೋ ಔಷಧಿ ಕುಡಿಸಿ, ನನ್ನ ಜೊತೆಯಿದ್ದ ಅಶ್ಲೀಲ ವಿಡಿಯೋ ತೋರಿಸಿ ಬೆದರಿಕೆ ಹಾಕಿದ್ದಕ್ಕೆ ಧರ್ಮೇಂದ್ರ ವಿರುದ್ಧ ಸಂತ್ರಸ್ತೆ ಕೆಲ ದಿನಗಳ ಹಿಂದೆ ದೂರು ದಾಖಲಿಸಿದ್ದರು ಎಂದು ಡಿಸಿಪಿ ಡಾ.ಬೋರಲಿಂಗಯ್ಯ ಅವರು ತಿಳಿಸಿದ್ದಾರೆ.

ದೂರಿನಲ್ಲಿ ಏನಿದೆ: ಧರ್ಮೇಂದ್ರ ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಪರಿಚಯಸ್ಥ ಮಹಿಳೆಯನ್ನು ಕರೆಸಿಕೊಂಡಿದ್ದ. ಬಳಿಕ ಚಿತ್ರೀಕರಣ ರದ್ದಾಗಿದೆ ಎಂದು ಹೇಳಿ ಊಟಕ್ಕೆ ಹೋಟೆಲ್‍ಗೆ ಕರೆಸಿಕೊಂಡಿದ್ದಾನೆ. ಆರ್.ಆರ್.ನಗರದ ಹೋಟೆಲ್‍ಗೆ ಕಾರು ಚಾಲಕ ನವೀನ್ ಮೂಲಕ ಮಹಿಳೆಯನ್ನು ಧರ್ಮೇಂದ್ರ ಕರೆಸಿಕೊಂಡಿದ್ದಾನೆ. ಊಟದ ಬಳಿಕ ಧರ್ಮೇಂದ್ರ ತಂಪು ಪಾನೀಯದಲ್ಲಿ ಮತ್ತು ಬರುವ ಔಷಧಿ ಬೆರೆಸಿ ಕುಡಿಸಿದ್ದಾನೆ. ಮಹಿಳೆಯೊಂದಿಗಿದ್ದ ಅಶ್ಲೀಲ ವಿಡಿಯೋ ತೋರಿಸಿ ಬೆದರಿಕೆ ಹಾಕಿದ್ದಾನೆ. ಅಲ್ಲದೇ ನಿಮ್ಮ ಕುಟುಂಬಕ್ಕೆ ಈ ವಿಡಿಯೋ ತೋರಿಸುವುದಾಗಿ ಬೆದರಿಕೆ ಹಾಕಿ 14 ಲಕ್ಷ ಹಣ ಸುಲಿಗೆ ಮಾಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದರು. ಈ ಬಗ್ಗೆ ಬೇಗೂರು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Actor dharma ಕುಟುಂಬ ಚಿತ್ರೀಕರಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ