ಕ್ಲಾಸ್ ನಲ್ಲಿ ಹಾವು: ದಿಕ್ಕಾಪಾಗಿ ಓಡಿದ ಮಕ್ಕಳು

A snake found at government school: children feared

10-08-2018 204

ವಿಜಯಪುರ: ಸರ್ಕಾರಿ ಶಾಲೆಯೊಂದರಲ್ಲಿ ತರಗತಿ ವೇಳೆ ಕ್ಲಾಸ್ ನಲ್ಲೆ ಹಾವು ಪತ್ತೆಯಾಗಿದೆ. ಆದರೆ ಅದೃಷ್ಟವಶಾತ್ ಶಾಲೆಯಲ್ಲಿ ಹಾವಿನಿಂದ ಅಹಿತಕರ ಘಟನೆ ನಡೆದಿಲ್ಲ. ಉಪಾಯವಾಗಿ ಹಾವು ಹಿಡಿದ ಶಿಕ್ಷಕರು, ಮಕ್ಕಳ ಪ್ರಾಣ ಉಳಿಸಿದ್ದಾರೆ. ಜಿಲ್ಲೆಯ ಸಿಂದಗಿ ತಾಲ್ಲೂಕಿನ ಸುರಗಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಾವು ಪ್ರತ್ಯಕ್ಷವಾಗಿದೆ. ಶಾಲಾ ಕೊಠಡಿಯಲ್ಲಿನ ಬೆಂಚ್ ಪಕ್ಕದಲ್ಲಿ ಹಾವು ಕಂಡು ಬಂದಿದೆ. ಹಾವನ್ನು ಕಂಡೊಡನೆ ಗಾಬರಿಗೊಂಡ ನೂರಾರು ವಿದ್ಯಾರ್ಥಿಗಳು ದಿಕ್ಕಾಪಾಲಾಗಿ ಓಡಿದ್ದಾರೆ. ಆದರೆ ಶಾಲಾ ಮುಖ್ಯ ಶಿಕ್ಷಕ ಎಸ್.ಎಸ್.ಚಿಂಚೋಳಿ ಅವರು ಉಪಾಯದಿಂದ ಹಾವನ್ನು ಸೆರೆ ಹಿಡಿದಿದ್ದಾರೆ. ನಂತರ ಅದನ್ನು ಕಾಡಿಗೆ ಬಿಟ್ಟಿದ್ದಾರೆ ಶಿಕ್ಷಕರು. ಇದರಿಂದ ಮಕ್ಕಳು ಶಿಕ್ಷಕರೂ ನಿಟ್ಟುಸಿರು ಬಿಟ್ಟಿದ್ದಾರೆ.


ಸಂಬಂಧಿತ ಟ್ಯಾಗ್ಗಳು

school snake ದಿಕ್ಕಾಪಾಲು ಪ್ರಾಥಮಿಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ