ಕರ್ಕಶ ಶಬ್ಧಕ್ಕೆ ಬ್ರೇಕ್ ಹಾಕಿದ ಪೊಲೀಸರು!

police seized heavy sound and altered silencers

10-08-2018

ಬೆಂಗಳೂರು: ಕರ್ಕಶವಾಗಿ ಸದ್ದು ಮಾಡುವ ಮೂಲಕ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುವ ವಾಹನಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿರುವ ಸಂಚಾರ ಪೊಲೀಸರು ನಗರದಾದ್ಯಂತ ದೋಷಪೂರಿತ ಸೈಲೆನ್ಸರ್ ಗಳನ್ನು ಕಿತ್ತು ವಾಹನಗಳ ಚಾಲಕರು ಬೈಕ್ ಸವಾರರಿಗೆ ಬಿಸಿ ಮುಟ್ಟಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕಳೆದ ಮೂರು ದಿನಗಳಿಂದ ಕರ್ಕಶ ಧ್ವನಿಯ ಸೈಲೆನ್ಸರ್ ಅಳವಡಿಕೆ ವಿರುದ್ಧ  ಜಾಗೃತಿ ಮೂಡಿಸಿರುತ್ತಿರುವ ಸಂಚಾರ ಪೋಲಿಸರು, ನಗರದಾದ್ಯಂತ ಶಬ್ದಮಾಲಿನ್ಯ ಉಂಟು ಮಾಡುತ್ತ ಬೈಕ್ ಚಲಾಯಿಸುವವರನ್ನು ಕಾರ್ಯಾಚರಣೆ ನಡೆಸಿ ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸ ತೊಡಗಿದ್ದಾರೆ.

ಇದುವರೆಗೂ ನಗರದಲ್ಲಿ ಶಬ್ದಮಾಲಿನ್ಯ ಉಂಟು ಮಾಡುವ ಸೈಲೆನ್ಸರ್ ಅಳವಡಿಕೆ ವಿರುದ್ಧದ ಮೂರು ದಿನಗಳ ಕಾರ್ಯಾಚರಣೆಯಲ್ಲಿ 1,156 ಪ್ರಕರಣ ದಾಖಲಿಸಿ, ವಾಹನಗಳ ಸೈಲೆನ್ಸ್ರ್ಗಳನ್ನು ಸಂಚಾರ ಪೊಲೀಸರು ಕಿತ್ತು ಹಾಕಿದ್ದಾರೆ.

ನಗರದ ಪೂರ್ವ, ಪಶ್ಚಿಮ ಮತ್ತು ಉತ್ತರ ಸಂಚಾರ ವಿಭಾಗಗಳಲ್ಲಿ ಕೆಲವು ಸವಾರರು ಉದ್ದೇಶಪೂರ್ವಕವಾಗಿ ಅದನ್ನು ಬದಲಾವಣೆ ಮಾಡಿಸಿಕೊಳ್ಳುತ್ತಾರೆ. ಇದರಿಂದ ಅತಿಯಾದ ಸದ್ದು ಉಂಟಾಗುತ್ತದೆ. ಈ ರೀತಿ ಶಬ್ದ ಮಾಲಿನ್ಯ ಉಂಟು ಮಾಡುತ್ತಿರುವ ಪ್ರಕರಣಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಮೂರು ದಿನಗಳ ಕಾಲ ವಿಶೇಷ ಕಾರ್ಯಾಚರಣೆ ನಡೆಸಿ, ಸಂಚಾರ ನಿಯಮ ಉಲ್ಲಂಘಿಸಿ ಶಬ್ದ ಮಾಲಿನ್ಯ ಉಂಟುಮಾಡುತ್ತಿದ್ದ 1,156 ದ್ವಿಚಕ್ರವಾಹನ ಸವಾರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು. ನಗರ ಪೂರ್ವ ವಿಭಾಗದ ಸಂಚಾರಿ ಪೊಲೀಸರು, ಕಾರ್ಯಾಚರಣೆ ನಡೆಸಿ ಒಂದೇ ದಿನದಲ್ಲಿ 317 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಇನ್ನು ಪಾದಚಾರಿ ಮಾರ್ಗದ ಮೇಲೆ ವಾಹನ ಚಲಾಯಿಸುತ್ತಿದ್ದವರ ಮೇಲೂ ಕಾರ್ಯಾಚರಣೆ ನಡೆಸಿ 917 ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

bike silencer sound ಪಾದಚಾರಿ ಕಾರ್ಯಾಚರಣೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ