ಚಿಕ್ಕಮಗಳೂರು: ಕಂಪಿಸಿದ ಭೂಮಿ ಭೀತಿಯಲ್ಲಿ ಗ್ರಾಮಸ್ಥರು

10-08-2018 218
ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲ್ಲೂಕಿನಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಒಂದೆಡೆ ಭಾರೀ ಮಳೆ ಮತ್ತೊಂದೆಡೆ ಭೂಮಿ ಕಂಪಿಸಿದ್ದು ಅಲ್ಲಿನ ಜನರು ಭಾರೀ ಆತಂಕಗೊಂಡಿದ್ದಾರೆ. ಭೂಮಿ ಒಳಗಿಂದ ಭಾರೀ ಸದ್ದು ಕೇಳಿಬಂದಿದ್ದು ಜನರು ಭಯಭೀತರಾಗಿದ್ದಾರೆ. ಕಳೆದೆರಡು ತಿಂಗಳಿಂದ ಆಗಾಗ ಈ ರೀತಿಯ ಅನುಭವವಾಗುತ್ತಿದ್ದು, ಇಂದೂ ಕೂಡ ಬೆಳಿಗ್ಗೆ 10 ಗಂಟೆ ಸಮಯದಲ್ಲಿ ಭೂಮಿ ಒಳಗಿಂದ ಭಾರೀ ಶಬ್ದ ಕೇಳಿ ಬಂದಿದ್ದು, ನಂತರ ಮನೆಯಲ್ಲಿನ ಪಾತ್ರೆಪಗಡೆ ಇತರೆ ವಸ್ತುಗಳು ಅಲುಗಾಡಿವೆ ಎಂದು ಗ್ರಾಮಸ್ಥರೊಬ್ಬರು ತಮಗಾದ ಅನುಭವ ಹೇಳಿಕೊಂಡಿದ್ದಾರೆ.
ಒಂದು ಕಮೆಂಟನ್ನು ಹಾಕಿ