ಬೀದರ್ ಗೆ ಆಗಮಿಸಲಿದ್ದಾರೆ ರಾಹುಲ್ ಗಾಂಧಿ

10-08-2018 207
ಬೀದರ್: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಇದೇ ತಿಂಗಳ 13ರಂದು ಬೀದರ್ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಲೋಕಸಭೆ, ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆ ಬೀದರ್ ನಲ್ಲಿ ಕಾಂಗ್ರೆಸ್ ನ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಮಾವೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಸಮಾವೇಶ ಹಿನ್ನೆಲೆ ಬೀದರ್ ನ ನೆಹರು ಕ್ರೀಡಾಂಗಣದಲ್ಲಿ ವೇದಿಕೆ ಪೂರ್ವಭಾವಿ ತಯಾರಿಗಳನ್ನು ಪರಿಶೀಲಿಸಿದ್ದಾರೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಹಾಗು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ. ಸಮಾವೇಶದ ಪೂರ್ವಭಾವಿ ಕಾರ್ಯಗಳು ಭರದಿಂದ ಸಾಗುತ್ತಿವೆ.
ಒಂದು ಕಮೆಂಟನ್ನು ಹಾಕಿ