ಎಸ್ಸಿ-ಎಸ್ಟಿ ಅನುದಾನ ಬಳಕೆ ಸರಿದಾರಿಯಲ್ಲಿದೆ: ಸಚಿವ ಪ್ರಿಯಾಂಕ ಖರ್ಗೆ

SC-ST grants using in a proper way: Minister Priyank Kharge

10-08-2018

ರಾಯಚೂರು: ಪರಿಶಿಷ್ಟ ಜಾತಿ ಹಾಗು ಪಂಗಡಗಳ ಅನುದಾನ ಖರ್ಚು ಆಗುತ್ತಿಲ್ಲ ಎನ್ನುವುದು ಸರಿ ಅಲ್ಲ. ಅನುದಾನ ಬಳಕೆಯಾಗುತ್ತಿದೆ. ಈಗಾಗಲೇ ಶೇಕಡಾ 93ರಷ್ಟು ಅನುದಾನ ಬಳಕೆಯಾಗಿದೆ ಎಂದು ಸಮಾಜ‌ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ರಾಯಚೂರಿನಲ್ಲಿ ಹೇಳಿದ್ದಾರೆ.

ವಿಶೇಷ ಘಟಕ ಯೋಜನೆಯಲ್ಲಿ ಹೆಚ್ಚು ಅನುದಾನ ಬಳಕೆ ಮಾಡಲಾಗುತ್ತಿದೆ. 2013ರಲ್ಲಿ ವಿಶೇಷ ಘಟಕದ ತಿದ್ದುಪಡಿ ಜಾರಿಗೆ ಬಂದ ನಂತರ ಏನಾಗಿದೆ ಎನ್ನುವುದನ್ನು ಬಹಿರಂಗ ಪಡಿಸುತ್ತೇವೆ ಎಂದು ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ. ಸದಾಶಿವ ಆಯೋಗದ ವರದಿಯ ಬಗ್ಗೆ ಕಾನೂನು ಇಲಾಖೆಗೆ ಕಳುಹಿಸಿದ್ದೇವೆ. ಅಲ್ಲಿಂದ ಒಪ್ಪಿಗೆ ಬಂದ ನಂತರ ಜಾರಿಗೆ ನಿರ್ಧರಿಸುತ್ತೇವೆ.

ಕೇಂದ್ರ ಸರಕಾರವು ಎಸ್ಸಿ/ಎಸ್ಟಿ ಕಾಯ್ದೆ ವಿಧೇಯಕ ಜಾರಿಗೆ ತಂದಿದೆ. ಈಗಲಾದರೂ ಕೇಂದ್ರ ಸರಕಾರಕ್ಕೆ ಅನುಭವವಾಯಿತಲ್ಲ ಎಂದು ಹೇಳಿದರು. ದಲಿತ ಸಂಘಟನೆಗಳ ಹೋರಾಟದಿಂದಾಗಿ ಹತ್ತು ದಿನಗಳಲ್ಲಿ ವಿಧೇಯಕಕ್ಕೆ ತಿದ್ದುಪಡಿ ತಂದಿದೆ. ರಾಜ್ಯದಲ್ಲಿರುವ ಎಲ್ಲಾ ಹಾಸ್ಟೆಲ್ ಗಳಲ್ಲಿ ಒಂದೇ ರೀತಿ ಸ್ಟಾಂಡರ್ಡ್ ತರಲು ಸಮಿತಿ ರಚಿಸಲಾಗಿದೆ.

ಬಡ್ತಿ ಮೀಸಲಾತಿ ಪ್ರಕರಣ ಸುಪ್ರೀಂ ಕೋರ್ಟಿನಲ್ಲಿದ್ದು, ತೀರ್ಪು ಬಂದ ನಂತರ ತೀರ್ಮಾನ ಮಾಡಲಾಗುವುದು ಎಂದರು. ಉತ್ತರ ಕರ್ನಾಟಕ ಹೈದ್ರಾಬಾದ್ ಕರ್ನಾಟಕದವರು ಕಷ್ಟ ಪಟ್ಟು ಒಂದಾಗಿದ್ದೇವೆ. ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಕಿಲ್ಲ. ಪ್ರತ್ಯೇಕ ರಾಜ್ಯ ಕೇಳಿದವರು ರಾಜ್ಯಕ್ಕಾಗಿ ಬೆವರು ಸುರಿಸಿದವರಲ್ಲ. ಎಂದು ಪ್ರತ್ಯೇಕತೆಗೆ ವಿರೋಧ ವ್ಯಕ್ತಪಡಿಸಿದ್ದಾರೆ ಸಚಿವ ಪ್ರಿಯಾಂಕ ಖರ್ಗೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ