ಭೋಜೇಗೌಡರ ಅಭಿಪ್ರಾಯವನ್ನು ನಾವ್ಯಾಕೆ ಒಪ್ಪಬೇಕು: ಡಿಸಿಎಂ

We don

10-08-2018

ಮಂಗಳೂರು: ‘ಕಾಂಗ್ರೆಸ್ ಸೋಲಿಗೆ ಹಿಂದೂಗಳನ್ನು ಕಡೆಗಣಿಸಿದ್ದು ಕಾರಣ ಎಂಬ ಜೆಡಿಎಸ್ ಮುಖಂಡ ಹಾಗು ವಿಧಾನಪರಿಷತ್ ಸದಸ್ಯ ಭೋಜೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಸಿಎಂ ಡಾ.ಜಿ.ಪರಮೇಶ್ವರ್, ‘ಭೋಜೇಗೌಡರ ಹೇಳಿಕೆಯನ್ನು ನಾವ್ಯಾಕೆ ಒಪ್ಪಬೇಕು, ಅದು ಅವರ ವಯಕ್ತಿಕ ಅಭಿಪ್ರಾಯ. ನಮ್ಮ ಪಕ್ಷಕ್ಕೆ ಯಾಕೆ ಸೋಲಾಯಿತು ಎಂದು ವಿಶ್ಲೇಷಣೆ ಮಾಡುತ್ತೇವೆ ಎಂದರು.

ಮಂಗಳೂರಲ್ಲಿ ಮಾಧ್ಯಮ ಪ್ರನಿಧಿಗಳೊಂದಿಗೆ ಮಾತನಾಡಿದ ಡಿಸಿಎಂ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ ಜೊತೆಗೆ ಯಾವುದೇ ಅಧಿಕೃತ ಮೈತ್ರಿ ಇಲ್ಲ, ಸ್ಥಳೀಯವಾಗಿ ಒಬ್ಬರಿಗೊಬ್ಬರು ಸಹಕಾರ ಕೊಟ್ಟರೆ ಕೊಡಬಹುದು ಎಂದಿದ್ದಾರೆ.

ಇದೇ ವೇಳೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ಅಂತಿಮ ಹಂತಕ್ಕೆ ಬಂದಿದೆ ಎಂದು ತಿಳಿಸಿದರು. 2017-18 ರಲ್ಲಿ 12 ಸಾವಿರ ರೈತರು ದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಆದ್ದರಿಂದಲೇ ರೈತರ ಕಷ್ಟ ಅರಿತು ರಾಜ್ಯದ ರೈತರ ಸಾಲಮನ್ನಾ ಮಾಡಿದ್ದೇವೆ. ಕೇಂದ್ರ ಸರ್ಕಾರ ಸಾಲಮನ್ನಾಗೆ ಅನುದಾನ ಕೊಟ್ಟಿದ್ದರೆ ನಾವು ರೈತರಿಗೆ ನೀರಾವರಿ ಸೇರಿದಂತೆ ವಿವಿಧ ರೀತಿಯಲ್ಲಿ ಕಾರ್ಯಕ್ರಮ ಕೊಡಬಹುದಿತ್ತು. ಆದರೆ, ಪ್ರಧಾನಿ ಮೋದಿಗೆ ರೈತರ ಹಿತ ಬೇಡ ಎಂದು ಟೀಕಿಸಿದ್ದಾರೆ.

ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ, ಕಾಂಗ್ರೆಸ್ ಸರ್ಕಾರದ ಯಾವುದೇ ಕಾರ್ಯಕ್ರಮಗಳು ನಿಲ್ಲಿಸುವುದಿಲ್ಲ. ಉತ್ತಮ ಆಡಳಿತ ನೀಡುವುದೇ ನಮ್ಮ ಸರ್ಕಾರದ ಉದ್ದೇಶ. ಬಿಜೆಪಿ ಅವಧಿಯ ಭ್ರಷ್ಟಾಚಾರ ಆಡಳಿತ ಮತ್ತೆ ಪುನರಾವರ್ತನೆ ಆಗಬಾರದು, ಈ ನಿಟ್ಟಿನಲ್ಲಿ ನಮ್ಮ ವರಿಷ್ಠರು ಸಮ್ಮಿಶ್ರ ಸರ್ಕಾರಕ್ಕೆ ಅನುಮತಿ ನೀಡಿದ್ದಾರೆ ಎಂದರು.


ಸಂಬಂಧಿತ ಟ್ಯಾಗ್ಗಳು

G. Parameshwara congress ಭ್ರಷ್ಟಾಚಾರ ಕಾರ್ಯಕ್ರಮ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ