ಒಳ ಉಡುಪಿನಲ್ಲಿ ಚಿನ್ನ: ಇಬ್ಬರು ಮಹಿಳೆಯರ ಬಂಧನ

illegal gold: 2 women arrested at devanahalli airport

09-08-2018

ಬೆಂಗಳೂರು: ಮಹಿಳೆಯರಿಬ್ಬರು ತಮ್ಮ ಒಳ ಉಡುಪಿನಲ್ಲಿ ಚಿನ್ನವನ್ನು ಬಚ್ಚಿಟ್ಟುಕೊಂಡು ಸಾಗಿಸುತ್ತಿದ್ದವರನ್ನು ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಐನಾತಿ ಮಹಿಳೆಯರಿಂದ ಸುಮಾರು 58 ಲಕ್ಷ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ತಮಿಳುನಾಡಿನ ಸೇಲಂ ಮೂಲದ ಷಹೀದಾ ಬಾನು ಮತ್ತು ಶಕೀನಾ ಶೇಖ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಸುಮಾರು 58 ಲಕ್ಷ ಮೌಲ್ಯದ 1 ಕೆ.ಜಿ 649 ಗ್ರಾಂ ಚಿನ್ನದ ಪುಡಿಯನ್ನ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಆರೋಪಿಗಳು ಚಿನ್ನವನ್ನು ತಮ್ಮ ಒಳ ಉಡುಪಿನಲ್ಲಿ ಇಟ್ಟುಕೊಂಡು ಸಾಗಾಟ ಮಾಡುತ್ತಿದ್ದರು. ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಅಧಿಕಾರಿ ಪರಿಶೀಲನೆ ಮಾಡುವಾಗ ಆರೋಪಿಗಳಿಬ್ಬರು ಸಿಕ್ಕಿಬಿದ್ದಿದ್ದಾರೆ.

ಚಿನ್ನ ಸಾಗಣೆ ಹಿಂದೆ ಸ್ಮಗ್ಲಿಂಗ್ ಮಾಫಿಯಾ ಅಡಗಿರುವ ಶಂಕೆ ವ್ಯಕ್ತವಾಗಿದ್ದು, ಮಹಿಳೆಯರ ಮೂಲಕ ವ್ಯವಸ್ಥಿತವಾಗಿ ಚಿನ್ನದ ಪುಡಿ ಸಾಗಿಸುತ್ತಿರುವ ಶಂಕೆ ವ್ಯಕ್ತವಾಗುತ್ತಿದೆ. ಚಿನ್ನವನ್ನು ಪುಡಿಮಾಡಿ ಅದನ್ನು ಒಳ ಉಡುಪಿಗೆ ಹೊಂದುವಂತೆ ಮಾಡಿಕೊಂಡು ಚಿನ್ನ ಸಾಗಣೆ ಕಂಡು ಕಸ್ಟಮ್ಸ್ ಆಧಿಕಾರಿಗಳೇ ಆಶ್ಚರ್ಯಚಕಿತರಾಗಿದ್ದಾರೆ. ಮಹಿಳೆಯರಿಂದ ಚಿನ್ನದ ಸಾಗಾಟ ಮಾಡಿಸುತ್ತಿರುವುದರ ಹಿಂದೆ ಸ್ಮಗ್ಲಿಂಗ್ ಮಾಫಿಯಾದ ಕೈವಾಡ ಇರುವ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

smuggling Gold ಮೌಲ್ಯ ಬಂಧಿತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ