ವರ್ತಕನೊಬ್ಬನಿಂದ ರೈತರಿಗೆ 2 ಕೋಟಿ ಹಣ ಮೋಸ

Av vendor cheated farmers!

09-08-2018

ಕೊಪ್ಪಳ: ವರ್ತಕರೊಬ್ಬರು ರೈತರಿಗೆ ಸುಮಾರು 2 ಕೋಟಿ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಗಂಗಾವತಿ ತಾಲ್ಲೂಕಿನ ರೈತರಿಂದ ಭತ್ತ ಖರೀದಿಸಿ ಹಣ ನೀಡದಂತೆ ಮೋಸ ಮಾಡಿದ್ದಾರೆ. ತಾಲ್ಲೂಕಿನ ರಾಂಪೂರ, ಮಲ್ಲಾಪೂರ ಭಾಗದ ರೈತರಿಂದ ಸುಮಾರು 7 ಸಾವಿರ ಭತ್ತದ ಮೂಟೆಗಳನ್ನು ಖರೀದಿ ಮಾಡಿದ್ದ ವರ್ತಕ ವಿರೇಶಗೌಡ, ಹಣ ನೀಡದೆ ಬ್ಯಾಲೆನ್ಸ್ ಇಲ್ಲದ ಅಕೌಂಟಿನ ಚೆಕ್ ನೀಡಿ ಅಲೆದಾಡುವಂತೆ ಮಾಡಿದ್ದಾರೆ. ಇದೀಗ ಹಣವೂ ಬರದೆ 7 ಸಾವಿರ ಭತ್ತದ ಮೂಟೆಗಳನ್ನು ಕೊಟ್ಟು ಕಂಗಾಲಾಗಿದ್ದಾರೆ ರೈತರು. ಘಟನೆ ಸಂಬಂಧ ಗಂಗಾವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ ರೈತರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವರ್ತಕನಿಗೆ ಸಹಾಯ ಮಾಡಿದ್ದಾರೆಂದು ವಿರೇಶಗೌಡನ ಸ್ನೇಹಿತರಾದ ನಾಜೀರ್, ಮನೋಜ್ ಎಂಬುವರನ್ನು ವಶಕ್ಕೆ ಪಡೆದಿದ್ದು, ವಿರೇಶಗೌಡನಿಗಾಗಿ ಬಲೆ ಬೀಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Farmers Business ವರ್ತಕ ಭತ್ತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ