ಮಾಹಿತಿ ನಿರಾಕರಣೆ: ಪ್ರಧಾನಿ ಕಚೇರಿ ಮೊರೆಹೋದ ಆರ್ಟಿಐ ಕಾರ್ಯಕರ್ತ

09-08-2018
ಬೆಂಗಳೂರು: ಕೇಂದ್ರ ಸರ್ಕಾರದಿಂದ ಸ್ವಚ್ಛ ಭಾರತ್ ಯೋಜನೆಗೆ ಬಿಬಿಎಂಪಿಗೆ ಹಣ ನೀಡಿದ್ದು, ಆ ಹಣವನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿ, ಸಾಮಾಜಿಕ ಕಾರ್ಯಕರ್ತ ಹಾಗು ಆರ್.ಟಿ.ಐ ಕಾರ್ಯಕರ್ತರೊಬ್ಬರು, ಈ ಕುರಿತು ಬಿಬಿಎಂಪಿ ಆಯುಕ್ತರ ಬಳಿ ಮಾಹಿತಿ ಕೇಳಿದ್ದಾರೆ. ಆದರೆ, ಇದನ್ನು ಆಯುಕ್ತರು ನಿರಾಕರಿಸಿದ್ದರು. ಮಾಹಿತಿ ನೀಡದ ಹಿನ್ನೆಲೆ, ಪ್ರಧಾನಮಂತ್ರಿ ಕಚೇರಿ ಮೊರೆ ಹೋದ ಸಾಮಾಜಿಕ ಕಾರ್ಯಕರ್ತ ಅಮರೇಶ್, ಪ್ರಧಾನಮಂತ್ರಿ ಕಚೇರಿಗೆ ಈ ಕುರಿತು ಪತ್ರ ಬರೆದಿದ್ದಾರೆ. ಕೂಡಲೆ ಇದಕ್ಕೆ ಪ್ರತಿಕ್ರಿಯೆ ನೀಡಿದ ಪ್ರಧಾನಿ ಕಚೇರಿ, ಅಮರೇಶ್ ಹಾಗೂ ತಮ್ಮ ಕಚೇರಿಗೂ ವರದಿ ನೀಡುವಂತೆ ಸೂಚಿಸಿ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ. ಮಾಹಿತಿ ಹಕ್ಕುದಾರನಿಗೆ ವರದಿ ನೀಡುವಂತೆ ಹೇಳಿದೆ. ಬಿಬಿಎಂಪಿಗೆ ಸ್ವಚ್ಛ ಭಾರತ್ ಯೋಜನೆಯಡಿ 154 ಕೋಟಿ ಹಣ ಬಿಡುಗಡೆ ಮಾಡಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.
ಒಂದು ಕಮೆಂಟನ್ನು ಹಾಕಿ