ಕಂಬಕ್ಕೆ ಕಟ್ಟಿಹಾಕಿ ಯುವಕನೊಬ್ಬನಿಗೆ ಸಖತ್ ಗೂಸಾ!

An group of women tied a guy to electric pole and assaulted!

09-08-2018

ಉಡುಪಿ: ಯುವತಿಯರನ್ನು ಚುಡಾಯಿಸುತ್ತಿದ್ದ ಯುವಕನೊಬ್ಬನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಧರ್ಮದೇಟು ನೀಡಿದ್ದಾರೆ ಯುವತಿಯರು ಮತ್ತು ಮಹಿಳೆಯರು. ಘಟನೆ ಕುಂದಾಪುರದ ಎಲ್.ಐ.ಸಿ ರಸ್ತೆಯಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ಜಾವೇದ್ ಥಳಿತಕ್ಕೊಳಗಾದ ಯುವಕ. ಬಹಳ ದಿನಗಳಿಂದಲೂ ಇಲ್ಲಿನ ಎಲ್.ಐ.ಸಿ ರಸ್ತೆಯಲ್ಲಿ ಓಡಾಡುವ ಯುವತಿಯರು ಮತ್ತು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ಜಾವೇದ್. ಇದನ್ನೇ ಚಾಳಿ ಮಾಡಿಕೊಂಡಿದ್ದ ಜಾವೇದ್ ಪ್ರತಿನಿತ್ಯ ಇದನ್ನೇ ಮಾಡುತ್ತಿದ್ದ. ಇನ್ನು ಇಂದು ಮಹಿಳೆಯರ ಸಹನೆ ಕಟ್ಟೆ ಒಡೆದಿದ್ದು, ಯುವತಿಯರು-ಮಹಿಳೆಯರು ಸೇರಿ ಆತನ್ನು ಹಿಡಿದು ವಿದ್ಯುತ್  ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗ ಥಳಿಸಿದ್ದಾರೆ. ನಂತರದಲ್ಲಿ ಜಾವೇದ್ ನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Road romeo womens ವಿದ್ಯುತ್ ಕಂಬ ಚಾಳಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ