ಹಾಡಹಗಲೇ ಮನೆ ಬೀಗ ಮುರಿದು ಚಿನ್ನಾಭರಣ ದರೋಡೆ

theft at home: 500 gram gold looted

08-08-2018

ಬೆಂಗಳೂರು: ಮಲ್ಲೇಶ್ವರಂನಲ್ಲಿ ಖಾಸಗಿ ಕಂಪನಿ ಉದ್ಯೋಗಿಯೊಬ್ಬರ ಮನೆಯ ಬೀಗ ಮುರಿದು ಒಳ ನುಗ್ಗಿರುವ ದುಷ್ಕರ್ಮಿಗಳು 500 ಗ್ರಾಂ. ಚಿನ್ನಾಭರಣ ಸೇರಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಹಾಡುಹಗಲೇ ದೋಚಿ ಪರಾರಿಯಾಗಿದ್ದಾರೆ.

ಮಲ್ಲೇಶ್ವರಂನ 13ನೇ ಕ್ರಾಸ್‍ನಲ್ಲಿರುವ ಮನೆಗೆ ಮಂಗಳವಾರ ಬೆಳಿಗ್ಗೆ 11ರ ವೇಳೆ ಬೀಗ ಹಾಕಿಕೊಂಡು ನೋಕಿಯ ಕಂಪನಿಯ ಯೋಜನಾ ವ್ಯವಸ್ಥಾಪಕರಾಗಿದ್ದ ಸುಧಾಕರ್ ಅವರು ಕೆಲಸಕ್ಕೆ ಹೋಗಿದ್ದು, ಉಪನ್ಯಾಸಕಿಯಾಗಿದ್ದ ಅವರ ಪತ್ನಿಯು ಪುತ್ರನನ್ನು ಕರೆದುಕೊಂಡು ಕಾಲೇಜಿಗೆ ಹೋಗಿದ್ದರು.

ಕೆಲಸ ಮುಗಿಸಿಕೊಂಡು ಸಂಜೆ 4ರ ವೇಳೆ ಮನೆಗೆ ಬಂದ ಸುಧಾಕರ್ ಅವರು ನೋಡಿದಾಗ ಮುಂಬಾಗಿಲಿಗೆ ಹಾಕಿದ್ದ ಬೀಗ ಮುರಿದು ಒಳ ನುಗ್ಗಿದ ದುಷ್ಕರ್ಮಿಗಳು, ಮನೆಯಲ್ಲಿದ್ದ ವಸ್ತುಗಳನ್ನೆಲ್ಲ ಚೆಲ್ಲಾಪಿಲ್ಲಿ ಮಾಡಿ ಬೀರುವಿನಲ್ಲಿದ್ದ 4 ನೆಕ್ಲೇಸ್, 10 ಬಳೆಗಳು, 8 ಚಿನ್ನದ ಚೈನು ಸೇರಿ 500 ಗ್ರಾಂ ತೂಕದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು.

ಕೂಡಲೇ ಸುಧಾಕರ್ ಅವರು ಮಲ್ಲೇಶ್ವರಂ ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಸುಧಾಕರ್ ಅವರು ಮನೆಯ ಡೋರ್‍ಲಾಕ್ ಕೆಟ್ಟಿದ್ದರಿಂದ ಮುಂಬಾಗಿಲಿನ ಚಿಲಕಕ್ಕೆ ಬೀಗ ಹಾಕಿದ್ದರು. ಅಲ್ಲದೆ ಮನೆಯಲ್ಲಿನ ಬೀರು, ಕಬೋರ್ಡ್ ಯಾವುದಕ್ಕೂ ಬೀಗ ಹಾಕಿರಲಿಲ್ಲ. ಮನೆಗೆ ಬೀಗ ಹಾಕಿರುವುದನ್ನು ಗುರುತಿಸಿ ಕಳ್ಳರು ಕೃತ್ಯ ನಡೆಸಿದ್ದು, ಪ್ರಕರಣ ದಾಖಲಿಸಿರುವ ಮಲ್ಲೇಶ್ವರಂ ಪೊಲೀಸರು ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ ಎಂದು ಡಿಸಿಪಿ ಚೇತನ್ ಸಿಂಗ್ ರಾಥೋರ್ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

robbery Gold ಚೆಲ್ಲಾಪಿಲ್ಲಿ ಕಂಪನಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ