ಎಸ್ಸಿ/ಎಸ್ಟಿ ಜನತೆ ಸಮಸ್ಯೆ ಆಲಿಸಲು ‘ಕಲ್ಯಾಣ ಕೇಂದ್ರ’

DCM g.parameshwara inaugurated

07-08-2018

ಬೆಂಗಳೂರು: ಅನುಸೂಚಿತ ಜಾತಿ ಮತ್ತು ಪಂಗಡದ ಜನತೆ ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುವ ಸಲುವಾಗಿ ಸಮಾಜ ಕಲ್ಯಾಣ ಇಲಾಖೆಯು ಸ್ಥಾಪಿಸಿರುವ “ಕಲ್ಯಾಣ ಕೇಂದ್ರ” ಸಹಾಯವಾಣಿಯನ್ನು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ಉದ್ಘಾಟಿಸಿದರು.

ನಂತರ ಮಾತನಾಡಿದ ಡಾ.ಪರಮೇಶ್ವರ್, ಈ ಕೇಂದ್ರವು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತದೆ. ಶೋಷಿತ ಜನಾಂಗದ ಅಭಿವೃದ್ಧಿ ಮತ್ತು ಆ ಸಮುದಾಯದ ಹಿತಕಾಯುವ ಸಲುವಾಗಿ ಈ ಕೇಂದ್ರವನ್ನು ಆರಂಭಿಸಲಾಗಿದೆ. ಶೋಷಿತ ಜನರು ತಮ್ಮ ಕುಂದುಕೊರತೆ ಮತ್ತು ಅಹವಾಲನ್ನು ಇಲ್ಲಿ ದಾಖಲಿಸಿಕೊಳ್ಳಬಹುದು ಎಂದರು.

ಸಮಾಜ ಕಲ್ಯಾಣ ಇಲಾಖೆಯ ಕಾರ್ಯಚಟುವಟಿಕೆಗಳು, ಇಲಾಖಾ ಯೋಜನೆಗಳ ಸಮಗ್ರ ಮಾಹಿತಿಯನ್ನು ಇಲ್ಲಿ ಪಡೆದುಕೊಳ್ಳಬಹುದಾಗಿದೆ. ಸಮಾಜ ಕಲ್ಯಾಣ ಇಲಾಖೆಯು ರಾಜ್ಯದಲ್ಲಿ ಸುಮಾರು 2500 ವಿದ್ಯಾರ್ಥಿ ವಸತಿ ನಿಲಯಗಳನ್ನು ನಡೆಸುತ್ತಿದ್ದು, ವಿದ್ಯಾರ್ಥಿಗಳು ಅಲ್ಲಿನ ಲೋಪದೋಷಗಳ ಬಗ್ಗೆಯೂ ಸಹ ಈ ಸಹಾಯ ಕೇಂದ್ರದಲ್ಲಿ ದೂರನ್ನು ದಾಖಲಿಸಬಹುದು, ಹಾಗೂ ಅನಾಮದೇಯ ದೂರುಗಳನ್ನು ದಾಖಲೆ ಮಾಡಿಕೊಂಡು ಪರಿಶೀಲನೆ ನಡೆಸಲಾಗುತ್ತದೆ. ಆದ್ದರಿಂದ ಸಾರ್ವಜನಿಕರು ಇದರ ಅನುಕೂಲವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು.

ವಸತಿ ನಿಯಲಗಳಲ್ಲಿ ಎಸ್‍ಸಿ ಎಸ್‍ಟಿ ವಿದ್ಯಾರ್ಥಿಗಳು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಹಾಸ್ಟೆಲ್‍ಗಳಲ್ಲಿ ಊಟದ ವ್ಯವಸ್ಥೆ, ಹಾಸಿಗೆ ದಿಂಬು, ವಸತಿ ಇತರೆ ಮೂಲ ಸೌಕರ್ಯದ ಸಮಸ್ಯೆಗಳಿದ್ದರೆ ವಿದ್ಯಾರ್ಥಿಗಳು ಈ ಸಹಾಯವಾಣಿಗೆ ಕರೆ ಅಥವಾ ವಾಟ್ಸ್ಆಪ್ ಮಾಡುವ ಮೂಲಕ ಸಮಸ್ಯೆ ತೋಡಿಕೊಳ್ಳಬಹುದು. ಜೊತೆಗೆ ಸಲಹೆಗಳನ್ನೂ ನೀಡಬಹುದು ಎಂದರು.

ಈ ದೂರಿಗೆ ಮೊದಲಿಗೆ ತಹಶೀಲ್ದಾರರು ಸ್ಪಂದಿಸಲಿದ್ದಾರೆ. ಇಲ್ಲದಿದ್ದರೆ ಜಿಲ್ಲಾಧಿಕಾರಿ, ರಾಜ್ಯ ಮಟ್ಟದವರೆಗೂ ಹೋಗಲಿದೆ. ಇಲ್ಲಿಯೂ ಪರಿಹಾರ ಸಿಗದಿದ್ದರೆ ಸಚಿವರ ಮಟ್ಟಕ್ಕೆ ಹೋಗಲಿದ್ದು, ಒಟ್ಟಾರೆ ಹಾಸ್ಟೆಲ್‍ನ ಎಸ್‍ಸಿ/ಎಸ್‍ಟಿ ಮಕ್ಕಳ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದರು.

ದಿನದ 24 ಗಂಟೆಯೂ ಈ ಕೇಂದ್ರ ಕಾರ್ಯನಿರ್ವಹಿಸಲಿದ್ದು, ದೇಶದಲ್ಲೇ ಮೊದಲ ಕೇಂದ್ರವಾಗಿದೆ. ಹಿಂದಿನಿಂದಲೂ ಎಸ್‍ಸಿ/ಎಸ್‍ಟಿಗಳ ಸಮಸ್ಯೆ ಬಗ್ಗೆ ದೂರುಗಳು ಇದ್ದವು. ಸದನದಲ್ಲೂ ಸಾಕಷ್ಟು ಚರ್ಚೆಯಾಗಿವೆ. ಆಯವ್ಯಯದಲ್ಲಿ ಬಿಡುಗಡೆಯಾಗುವ ಅಷ್ಟೂ ಅನುದಾನವೂ ಈ ಮಕ್ಕಳಿಗೆ ತಲುಪಿ, ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಮಾಡುವುದೇ ಇಲಾಖೆ ಹಾಗೂ ಸರಕಾರದ ಉದ್ದೇಶ ಎಂದು ಹೇಳಿದರು. ಕೇಂದ್ರವನ್ನು ಸಂಪರ್ಕಿಸಲು ಸಹಾಯವಾಣಿ ಸಂಖ್ಯೆ-080-22634300, ವಾಟ್ಸ್ಆಪ್ ಸಂಖ್ಯೆ-9901100000. ಸಮಾರಂಭದಲ್ಲಿ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ, ನಗರದ ಮಹಾಪೌರ ಆರ್.ಸಂಪತ್ ರಾಜ್ ಮತ್ತಿತರರು ಹಾಜರಿದ್ದರು.


ಸಂಬಂಧಿತ ಟ್ಯಾಗ್ಗಳು

g.parameshwara sc/st ಕಲ್ಯಾಣ ಕೇಂದ್ರ ಶೋಷಿತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Good job
  • Kadappa
  • Student
ನಾನು.. ಅದೀದ್ರಾವೀಡ...ಸೇರೀದವಾ
  • Murthy. H. N
  • ಡ್ಮವರ್