ರೈತನಾಗಿ ಗದ್ದೆಗಿಳಿಯಲಿದ್ದಾರೆ ಸಿಎಂ!

Cm kumaraswamy as a farmer on 11 august!

07-08-2018

ಮಂಡ್ಯ: ಇದೇ ತಿಂಗಳ ಆಗಸ್ಟ್‌ 11ರಂದು ಸಿಎಂ ಕುಮಾರಸ್ವಾಮಿ ಅವರು, ಪಾಂಡವಪುರ ತಾಲ್ಲೂಕಿನ ಸೀತಾಪುರದಲ್ಲಿ ರೈತನಾಗಿ ಭತ್ತದ ನಾಟಿ ಮಾಡಲಿದ್ದಾರೆ. ಇದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಜಿಲ್ಲಾಡಳಿತ ಮಾಡಿಕೊಳ್ಳುತ್ತಿದೆ‌. ಅಂದು ಬೆಳಗ್ಗೆ 11 ಗಂಟೆಗೆ ಸೀತಾಪುರಕ್ಕೆ ಸಿಎಂ ಆಗಮಿಸಲಿದ್ದು, ಹಳೇ ಗದ್ದೆಯ ಬಯಲಿನಲ್ಲಿ ರೈತ ಮಹಿಳೆಯರೊಂದಿಗೆ ನಾಟಿ ಮಾಡಲಿದ್ದಾರೆ. ಜೊತೆಗೆ ರೈತರ ಕುಶಲೋಪರಿ ವಿಚಾರಿಸಲಿದ್ದಾರೆ. ಈ ಸಂಬಂಧ ಮಾಹಿತಿ ಹಂಚಿಕೊಂಡ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು, ಜಮೀನಿನ ಸಿದ್ಧತೆಗಳು ನಡೆಯುತ್ತಿವೆ. ಸಿಎಂಗೆ ಸ್ವಾಗತ ಕೋರಲು ರೈತರು ಕಾಯುತ್ತಿದ್ದಾರೆ ಎಂದು ಹೇಳಿದರು.


ಸಂಬಂಧಿತ ಟ್ಯಾಗ್ಗಳು

H.D.Kumaraswamy Farmers ಸಿದ್ಧತೆ ಗದ್ದೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ