ಶಾಲಾ ಮಕ್ಕಳಿಂದ ಮನೆಕೆಲಸ ಮಾಡಿಸುತ್ತಿದ್ದ ಶಿಕ್ಷಕರು!

school children doing teachers household works in village!

07-08-2018

ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಹೊಸಳ್ಳಿ ಗ್ರಾಮದ ಸರ್ಕಾರಿ ಶಾಲೆ ಶಿಕ್ಷಕರಿಂದ ಮಕ್ಕಳ ಮೇಲೆ ದೌರ್ಜನ್ಯ ಎಸಗುತ್ತಿರುವ ಕೃತ್ಯ ಬೆಳಕಿಗೆ ಬಂದಿದೆ. ಶಾಲೆಯ ಸಮಯದಲ್ಲೇ ಪಾಠ ಕಲಿಸೋ ಬದಲು ಮನೆ ಕೆಲಸ ಮಾಡಿಸುತ್ತಿದ್ದು, ಶಿಕ್ಷಕ ವೃತ್ತಿಗೆ ಅವಮಾನವಾಗುವಂತಹ ಕೆಲಸ ಮಾಡುತ್ತಿದ್ದಾರೆ. ಬಟ್ಟೆ ತೊಳೆಯುವುದು ಸೇರಿದಂತೆ ಪಾತ್ರೆ ತೊಳೆಯುವ ಕೆಲಸವನ್ನು ಶಾಲಾ ಮಕ್ಕಳಿಂದಲೇ ಮಾಡಿಸುತ್ತಿದ್ದಾರೆ.

ಗಂಗಾವತಿ ತಾಲ್ಲೂಕಿನ ಹೊಸಳ್ಳಿ ಗ್ರಾಮದ ಸರ್ಕಾರಿ ಶಾಲೆ ಮಕ್ಕಳಿಗೆ ಮನೆ ಕೆಲಸವೇ ಶಿಕ್ಷಣ ಎಂಬಂತಾಗಿದೆ. ಶಾಲೆಯ ಮುಖ್ಯೋಪಾಧ್ಯಾಯಿನಿ ಸೇರಿದಂತೆ ದೈಹಿಕ ಶಿಕ್ಷಕರಿಂದ ಮಕ್ಕಳಿಗೆ ಕೆಲಸದ ಕಿರುಕುಳ ನೀಡುತ್ತಿದ್ದಾರೆ. ಶಾಲೆಯಲ್ಲಿ ಪಾಠ ಮಾಡುತ್ತಿದ್ದರೂ, ಅತ್ತ ಮಕ್ಕಳಿಗೆ ಕೆಲಸ ಮಾಡು ಅಂತ ಹೇಳುತ್ತಾರೆ. ಶಿಕ್ಷಕರಾದ ಮೋನಮ್ಮ, ಚಂದ್ರಶೇಖರ ಎಂಬ ಶಿಕ್ಷಕರು ಮನೆ ಕೆಲಸ ಮಾಡಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಮಕ್ಕಳಿಂದ ಕೆಲಸ ಮಾಡಿಸುತ್ತಿರುವ ದೃಶ್ಯಗಳು ಮೊಬೈಲ್ ನಲ್ಲಿ  ಸೆರೆಯಾಗಿದೆ. ಈ ದೃಶ್ಯಗಳನ್ನು ಕಂಡ ಮಕ್ಕಳ ಪೋಷಕರು ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Teacher government school ದೌರ್ಜನ್ಯ ಸಮಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ