ಮೈಸೂರೂ ದಸರಾಗೆ ಈಗಿನಿಂದಲೇ ಸಿದ್ಧತೆ

pre-preparations for mysore dasara

06-08-2018

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2018ರ ಹಿನ್ನೆಲೆ ದಸರಾದ ಮೊದಲ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಿದ್ದು, ಗಜಪಯಣಕ್ಕೆ ತಯಾರಿ ಮಾಡಿಕೊಳ್ಳುತ್ತಿದೆ ಅರಣ್ಯ ಇಲಾಖೆ. ಅಕ್ಟೋಬರ್ 10 ರಿಂದ 19ರವರಗೆ ದಸರಾ ಮಹೋತ್ಸವ ನಡೆಯಲಿದ್ದು. ದಸರಾ ಗಜಪಡೆ ತಾತ್ಕಾಲಿಕ ಪಟ್ಟಿ ಸಿದ್ಧತೆಗೊಂಡಿದೆ ಎಂದು ತಿಳಿದು ಬಂದಿದೆ. ಸುಮಾರು 15 ಆನೆಗಳ ಪಟ್ಟಿ ಸಿದ್ಧಪಡಿಸಿದ್ದಾರೆ ಹಿರಿಯ ಅರಣ್ಯ ಇಲಾಖೆ ಅಧಿಕಾರಿಗಳು. ಕಿರಿಯ ಆನೆಗಳಾದ ದ್ರೋಣ, ಧನಂಜಯನಿಗೆ ಈ ಬಾರಿ ಅವಕಾಶ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಆನೆ ವೈದ್ಯ ಡಾ. ನಾಗರಾಜು ಅವರ ತಂಡ ದುಬಾರೆ, ಮತ್ತಿಗೋಡು, ಬಳ್ಳೆ ಹಾಗೂ ಬಂಡೀಪುರದ ಆನೆ ಶಿಬಿರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಜರಾಜರ ಆರೋಗ್ಯ, ಸಾಮರ್ಥ್ಯ, ಮನಸ್ಥಿತಿ, ಚಲನವಲನಗಳನ್ನ ಗಮನಿಸಿ ಆನೆಗಳನ್ನ ಆಯ್ಕೆ ಮಾಡಲಾಗಿದೆ.

ಅರ್ಜುನ, ಅಭಿಮನ್ಯು, ಗಜೇಂದ್ರ, ಬಲರಾಮ, ಗೋಪಾಲಸ್ವಾಮಿ, ಗೋಪಿ, ವರಲಕ್ಷ್ಮಿ, ವಿಜಯ, ಕಾವೇರಿ, ಚೈತ್ರಾ, ಪ್ರಶಾಂತ್, ಹರ್ಷ, ವಿಕ್ರಮ, ಧನಂಜಯ, ದ್ರೋಣ ಎಂಬ 15 ಆನೆಗಳ ಹೆಸರನ್ನು ಫೈನಲ್ ಮಾಡಿ ಬೆಂಗಳೂರಿನ ಕಛೇರಿಗೆ ಕಳುಹಿಸಲಾಗಿದೆ ಎಂದೂ ಕೂಡ ತಿಳಿದು ಬಂದಿದೆ. 60 ವರ್ಷ ದಾಟಿದ ಆನೆಗಳೂ ಸಹ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಇನ್ನು ಎರಡನೇ ತಲೆಮಾರಿನ ಗಜಪಡೆ ಸೃಷ್ಟಿಮಾಡಲು ಎರಡು ಆನೆಗಳಿಗೆ ಹೊಸದಾಗಿ ಅವಕಾಶ ಕಲ್ಪಿಸಲಾಗಿದೆ. ಮೊದಲ ಹಂತದಲ್ಲಿ 6 ಆನೆಗಳನ್ನು ಗಜಪಯಣದಲ್ಲಿ ಕರೆ ತರಲಾಗುತ್ತದೆ. ಹೊಸ ಆನೆಗಳಿಗೆ ಮೊದಲೇ ಕರೆಸಿಕೊಂಡು ಭಾರ ಹೊರುವ ತಾಲಿಮು ನಡೆಸಲಾಗುತ್ತದೆ ಎಂದು, ಆನೆ ವೈದ್ಯ ಡಾ.ನಾಗರಾಜು ಅವರು ಮಾಹಿತಿ ನೀಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Vijayadashami Mysore Dasara ತಾಲಿಮು ಆನೆ ವೈದ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ